ಮೈಸೂರು-ಬೆಂಗಳೂರು ಹೆದ್ದಾರಿ ಕ್ರೆಡಿಟ್ ವಾರ್: ಸಂಸದ ಪ್ರತಾಪ್ ಸಿಂಹಗೆ ಸುಮಲತಾ ಅಂಬರೀಶ್ ಪರೋಕ್ಷ ಟಾಂಗ್. ಮಂಡ್ಯ,ಜೂನ್,28,2022(..):ಮೈಸೂರು-ಬೆಂಗಳೂರು ಹೆದ್ದಾರಿ ಕ್ರೆಡಿಟ್ ವಾರ್ ಮುಂದುವರೆದಿದ್ದು ಈ ಕುರಿತು ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹಗೆ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಪರೋಕ್ಷ ಟಾಂಗ್ ನೀಡಿದ್ದಾರೆ. ಅವರು ಕೆಲಸ ಮಾಡಿಸ್ತಿದ್ದಾರೆ ಬೇಜಾರಿಲ್ಲ. ನನಗೆ ಯಾರ ಮೇಲೂ ಕೋಲ್ಡ್ ವಾರ್ ಇಲ್ಲ. ನನಗೆ ಕ್ರೆಡಿಟ್ ತೆಗೆದುಕೊಳ್ಳುವ ಅನಿವಾರ್ಯ ಇಲ್ಲ. ನನ್ನಿಂದ ಯಾವುದೇ ಕಾಮಗಾರಿ ವಿಳಂಬವಾಗಿಲ್ಲ. ಫೋಟೊ ತೆಗೆದುಕೊಂಡು ಮೀಡಿಯಾ ಮುಂದೆ ಬರಲು ಆಗಲ್ಲ. ಮಿಡಿಯಾ ಮುಂದೆ ಬಂದು ಕುಳಿತರೇ ಕೆಲಸ ಆಗಲ್ಲ ಎಂದು ಸಂಸದ ಪ್ರತಾಪ್ ಸಿಂಹಗೆ ಸಂಸದೆ ಸುಮಲತಾ ಅಂಬರೀಶ್ ಪರೋಕ್ಷವಾಗಿ ಕುಟುಕಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಹೋಗಲ್ಲ. ನನಗೆ ರಾಜಕೀಯ ಅನಿವಾರ್ಯ ಇಲ್ಲ. ಮಂಡ್ಯದ ಜನತೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಮಂಡ್ಯ ಜನರ ಋಣ ತೀರಿಸಲು ರಾಜಕೀಯಕ್ಕೆ ಬಂದಿದ್ದೇನೆ. ನಾನು ಮಂಡ್ಯ ಬಿಡಲ್ಲ . ಕೆಲವರು ನಾನು ಮಂಡ್ಯ ಬಿಡೋ ಕನಸು ಕಾಣುತ್ತಿದ್ದಾರೆ. ಅದು ನನಸಾಗಲ್ಲ. ನಾನು ಎಂದಿಗೂ ಮಂಡ್ಯದಲ್ಲೇ ಇರುತ್ತೇನೆ ನನಗೆ ಅಧಿಕಾರದ ಆಸೆ ಇಲ್ಲ ಎಂದರು. : --- - – … - : , 28, 2022 (..): - . .“ , ’ . ’ . ’ . . ’ . ’ ,” . , , “ ’ . . . . ’ . . ’ .”: / / - —————————————————