ಡಿಸೆಂಬರ್’ನಿಂದ ರಕ್ಷಿತ್ ಶೆಟ್ಟಿಯ ‘ರಿಚರ್ಡ್ ಆ್ಯಂಟೊನಿ’ ಶೂಟಿಂಗ್ ಬೆಂಗಳೂರು, ಜೂನ್ 28, 2022 (..):ನಟ ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನಿಮಾ ‘ರಿಚರ್ಡ್ ಆ್ಯಂಟೊನಿ’ ಸಿನಿಮಾ ಕುರಿತ ಹೊಸ ಸುದ್ದಿ ಹೊರಬಿದ್ದಿದೆ. 777 ಚಾರ್ಲಿ ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ರಕ್ಷಿತ್ ಅವರ ಮುಂದಿನ ಸಿನಿಮಾ ಯಾವಾಗ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಈ ಕುರಿತ ಅಪ್ಡೇಟ್ ಈಗ ಸಿಕ್ಕಿದೆ. ಉಳಿದವರು ಕಂಡಂತೆ ಮುಂದುವರೆದ ಭಾಗ ಎನ್ನಲಾಗುತ್ತಿರುವ ‘ರಿಚರ್ಡ್ ಆ್ಯಂಟೊನಿ’ ಚಿತ್ರದ ಶೂಟಿಂಗ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ ಎನ್ನಲಾಗುತ್ತಿದೆ. ಸದ್ಯ ರಕ್ಷಿತ್ ಶೆಟ್ಟಿ ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಶೂಟಿಂಗ್ ಮುಗಿದ ನಂತರ ಅವರು ‘ರಿಚರ್ಡ್ ಆ್ಯಂಟೊನಿ’ ಸಿನಿಮಾವನ್ನು ಆರಂಭಿಸಲಿದ್ದಾರೆ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡುತ್ತಿದ್ದು, ಟೈಟಲ್​ ಅನ್ನು ವಿಡಿಯೋ ಮೂಲಕ ರಿವೀಲ್ ಮಾಡಲಾಗಿತ್ತು.