ಹೊಸ ಆಲೋಚನೆಗಳನ್ನು ಕೆರಿಯರ್ ಹಬ್ ಜೊತೆ ಹಂಚಿಕೊಳ್ಳಿ: ಪ್ರೊ. ಜಿ.ಹೇಮಂತ್ ಕುಮಾರ್ ಸಲಹೆ. ಮೈಸೂರು,ಜೂನ್,27,2022(..):ವಿದ್ಯಾರ್ಥಿಗಳು ತಮ್ಮ ಹೊಸ ಆಲೋಚನೆ, ಐಡಿಯಾಗಳನ್ನು ವಿವಿಯ ಕೆರಿಯರ್ ಹಬ್‌ ನೊಂದಿಗೆ ಹಂಚಿಕೊಳ್ಳಿ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ ವಿಜ್ಞಾನ ಹಬ್ಬ ಯುರೇಕಾ 2022 ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುವರಾಜ ಕಾಲೇಜು ಕರ್ನಾಟಕದ ಬೆಸ್ಟ್ ಕಾಲೇಜು. ಇಲ್ಲಿ ಓದಲು ಪುಣ್ಯ ಮಾಡಿರಬೇಕು. 1914ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿ ಶುರು ಮಾಡಲು ಚಿಂತನೆ ಮಾಡಿದರು. ಆಗ ಮದ್ರಾಸ್ ವಿವಿ ಸಹಯೋಗವಿತ್ತು. ಅಂತಿಮವಾಗಿ 1916ರಲ್ಲಿ ಮೈಸೂರು ವಿವಿ ಆರಂಭವಾಯಿತು. ಹಾಗೆ ಯುವರಾಜ ಕಾಲೇಜು ಕೂಡ ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಪ್ರೊ. ನಂಜುಂಡಯ್ಯ ಅವರು ಈ ವಿವಿಯ ಮೊದಲ ಕುಲಪತಿ ಆಗಿದ್ದರು. ಇವರು ವಿವೇಕಾನಂದರ ಸಹಪಾಠಿ ಕೂಡ ಆಗಿದ್ದರು. ಸರ್‌ ಎಂವಿಗೆ ಪಾಠ ಮಾಡಿದ ಶಿಕ್ಷಕರು ಈ ಕಾಲೇಜಿನಲ್ಲಿ ಬೋಧನೆ ಮಾಡಿದ್ದಾರೆ. ಆಗ ವಿಜ್ಞಾನ ಓದಲು ಈಗಿನಷ್ಟು ಕಾಲೇಜುಗಳು ಇರಲಿಲ್ಲ. ಕೇವಲ 4 ಕಾಲೇಜು ಮಾತ್ರ ಇತ್ತು. ಯುವರಾಜ, ಶಾರದವಿಲಾಸ, ಸೆಂಟ್ ಫಿಲೋಮಿನಾ ಹಾಗೂ ಜೆಎಸ್‌ಎಸ್. 2005 ಈ ಕಾಲೇಜು ಸ್ವಾಯತ್ತತೆ ಪಡೆದುಕೊಂಡಿತು. ಪ್ರಸ್ತುತ 4 ಸಾವಿರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು. ಅಂಕದ ಜೊತೆ ವಿದ್ಯಾರ್ಥಿಗಳು ಹೊಸ ಹೊಸ ಆಲೋಚನೆ ಮಾಡಬೇಕು. ಮೈಸೂರು ವಿವಿಯ ಕೆರಿಯರ್ ಹಬ್ ಇದೆ. ನಿಮ್ಮ ಆಲೋಚನೆ ಏನೇ ಇದ್ದರೂ ಅಲ್ಲಿ ಹಂಚಿಕೊಳ್ಳಬಹುದು. ಪ್ರಕೃತಿಯಲ್ಲಿ ಇರುವುದನ್ನು ವಿಭಿನ್ನ ಆಲೋಚನೆ ಸಂಶೋಧನೆ ಮಾಡಿ. ನಿಮ್ಮ ಆಲೋಚನೆಯನ್ನು ಹೇಗೆ ಸಂಶೋಧನೆ ಮಾಡಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಪ್ರತಿ ವರ್ಷ ಯುವರಾಜ ಕಾಲೇಜಿನಿಂದ ಸಾವಿರ ಜನ ಹೊರಗೆ ಹೋಗುತ್ತಾರೆ. ಅವರೆಲ್ಲ ಉತ್ತಮ ಸಂಶೋಧಕರು ಹಾಗೂ ವಿಜ್ಞಾನಿಗಳು ಆಗಬೇಕು. ಸದ್ಯ ಎನ್‌ ಇಪಿ ಶುರುವಾಗಿದೆ. ಅಂತರ ಶಿಸ್ತೀಯ ಕೋರ್ಸ್ ಗಳು ಇರುವುದು ಒಳ್ಳೆಯ ಬೆಳವಣಿಗೆ ಎಂದರು. ಕಾರ್ಯಕ್ರಮ ಸಂಯೋಜಕರಾದ ಡಾ.ರೂಬಿ ಸೆಲೆಸ್ಟಿನಾ ಮಾತನಾಡಿ, 2013ರಲ್ಲಿ ಮೊದಲ ಬಾರಿಗೆ ವಿಜ್ಞಾನ ಹಬ್ಬವಾದ ಯುರೇಕಾ ಶುರುವಾಯಿತು. ವಿದ್ಯಾರ್ಥಿಗಳೇ ಇಂತಹ ಕಾರ್ಯಕ್ರಮ ಹುಟ್ಟಲು ಕಾರಣ. ಇದು ಅವರದೇ ಆಲೋಚನೆ. ಸಣ್ಣ ಮಟ್ಟದಲ್ಲಿ ಶುರುವಾದ ಈ ಅಂತರ್ ಕಾಲೇಜು ಕಾರ್ಯಕ್ರಮ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ವಿಜ್ಞಾನ ನಾನಾ ಒಳಹುಗಳನ್ನು ಅರ್ಥ ಮಾಡಿಕೊಳ್ಳಲು ಯುರೇಕಾ ಸಹಕಾರಿಯಾಗಿದೆ. ವಿಜ್ಞಾನ-ಕಲೆ-ಸಾಂಸ್ಕೃತಿಕತೆಯ ಹೂರಣವೇ ಯುರೇಕಾ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಎನ್.ಯಶೋಧ, ಸೇರಿದಂತೆ ಇತರರು ಇದ್ದರು. : - –- - --. . … . . ‘ ’, 27, 2022 (..): “ ‘ ,’ . . , -, . ‘-2022,’ , . , . . , “ . . 1914. , . 1916. . . - , . ’ . .”“ . , , , . ’ . 2005. ,” .“ , . . , . . . . . , . ,” . , . , “ 2013. . . , , . . --.” . .. . : / -2022/