ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲಿಸುವಂತಿಲ್ಲ : ಡಿಜಿ&ಐಜಿಪಿ ಪ್ರವೀಣ್ ಸೂದ್ ಸೂಚನೆ ಬೆಂಗಳೂರು,ಜೂನ್,27,2022(..):ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲಿಸುವಂತಿಲ್ಲ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಡಿಜಿ&ಐಜಿಪಿ ಪ್ರವೀಣ್ ಸೂದ್, ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲಿಸುವಂತಿಲ್ಲ. ಟ್ರಾಫಿಕ್ ಪೊಲೀಸರು ಬೇಕಾಬಿಟ್ಟಿ ವಾಹನಗಳನ್ನು ತಡೆಯುವಂತಿಲ್ಲ. ಸುಖಾಸುಮ್ಮನೆ ವಾಹನಗಳನ್ನ ತಡೆದು ಪರಿಶೀಲಿಸದಂತೆ ಸೂಚನೆ ನೀಡಿದ್ದಾರೆ. ಡ್ರಂಕ್ & ಡ್ರೈವ್ ಮಾತ್ರ ತಪಾಸಣೆ ಮಾಡಬೇಕು. ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ವಹಿಸಬೇಕು. ಆದರೆ ಸುಖಾಸುಮ್ಮನೆ ವಾಹನ ತಡೆದು ಪರಿಶೀಲನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬಂದಿದೆ. ಹೀಗಾಗಿ ವಾಹನಗಳನ್ನು ತಡೆಯದಂತೆ ಸಂಚಾರಿ ಪೊಲೀಸರಿಗೆ ಟ್ವೀಟ್ ಮೂಲಕ ಡಿಜಿ&ಐಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. : - –- & - –-