ಲೋಕಾಯುಕ್ತ ಅಧಿಕಾರಿಗಳ ಕಂಡು ಪಕ್ಕದ ಮನೆಗೆ ಚಿನ್ನವಿದ್ದ ಬ್ಯಾಗ್ ಎಸೆದ ಅಧಿಕಾರಿ ಬೆಂಗಳೂರು,ಜುಲೈ,19,2024 (..):ಬೆಳ್ಳಂಬೆಳಿಗ್ಗೆ ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು ಈ ಮಧ್ಯೆ ಲೋಕಾಯುಕ್ತ ಅಧಿಕಾರಿಗಳನ್ನ ಕಂಡ ಕೂಡಲೇ ಅಧಿಕಾರಿಯೊಬ್ಬರು ಚಿನ್ನವಿದ್ದ ಬ್ಯಾಗ್‌ ಅನ್ನು ಕಿಟಕಿಯಿಂದ ಪಕ್ಕದ ಮನೆಗೆ ಎಸೆದ ಘಟನೆ ನಡೆದಿದೆ. ಕಾನೂನು ಮಾಪನ ಇಲಾಖೆ ಡೆಪ್ಯುಟಿ ಕಂಟ್ರೋಲರ್ ಅತ್ತರ್ ಆಲಿ ಎಂಬವರ ನಿವಾಸ ಮತ್ತು ಕಚೇರಿ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ಅಧಿಕಾರಿ ಅತ್ತರ್ ಆಲಿ ಮನೆ ಮೇಲೆ ದಾಳಿಯಾಗಿದ್ದು ಪರಿಶೀಲನೆ ವೇಳೆ ಅತ್ಹರ್ ಆಲಿ ಮನೆಯಲ್ಲಿ ಹಣ, ಚಿನ್ನ ಪತ್ತೆಯಾಗಿದೆ. ಅಧಿಕಾರಿಗಳನ್ನ ನೋಡಿದ ಅತ್ಹರ್ ಆಲಿ ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನವಿದ್ದ ಬ್ಯಾಗ್ ಎಸೆದಿದ್ದಾರೆ. ಬ್ಯಾಗ್ ಎಸೆದಿದ್ದನ್ನ ನೋಡಿ ನೆರೆಮನೆ ನಿವಾಸಿ ಖುದ್ದು ಅಧಿಕಾರಿಗಳನ್ನ ಕರೆದಿದ್ದಾರೆ. ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ನಂತರ ಅಧಿಕಾರಿಗಳು ಬ್ಯಾಗ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. : , , ,