2 ತಾಸಿನಲ್ಲಿ ಮುಗಿಯಬೇಕಿದ್ಧ ವಿಚಾರಣೆ 40 ಗಂಟೆವರೆಗೆ ; ನನಗಿಂತ ರಾಹುಲ್ ಗಾಂಧಿಗೆ ಹೆಚ್ಚು ಕಿರುಕುಳ- ಡಿ.ಕೆ ಶಿವಕುಮಾರ್ ಕಿಡಿ. ನವದೆಹಲಿ,ಜೂನ್,21,2022(..): ಎರಡು ತಾಸಿನಲ್ಲಿ ಮುಗಿಯಬೇಕಿದ್ಧ ವಿಚಾರಣೆಯನ್ನ 40 ಗಂಟೆಗಳ ಕಾಲ ಮಾಡಿದ್ದಾರೆ. ನನಗಿಂತ ರಾಹುಲ್ ಗಾಂಧಿಗೆ ಹೆಚ್ಚು ಕಿರುಕುಳ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದರು. ಇಡಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆ ಇಂದು ಮುಂದುವರೆದಿದ್ದು ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಈವರೆಗೂ 40 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಕೇವಲ 2 ಗಂಟೆ ವಿಚಾರಣೆ ಮುಗಿಸಬಹುದಾದ ಪ್ರಕರಣ ಇದು. ಆದರೆ ಕೇವಲ ಕಿರುಕುಳ ನೀಡುವುದಕ್ಕಾಗಿಯೇ ವಿಚಾರಣೆ ನಡೆಸಿದ್ದಾರೆ ನನಗಿಂತ ಹೆಚ್ಚು ರಾಹುಲ್ ಗಾಂಧಿಗೆ ಕಿರುಕುಳ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು . ಇಡಿ ವಿಚಾರಣೆಯನ್ನ ನಾವು ಅನುಭವಿಸಿದ್ದೇವೆ. ನನ್ನ ಕುಟುಂಬಕ್ಕೂ ಸಾಕಷ್ಟು ಹಿಂಸೆ ನೀಡಿದ್ದಾರೆ. ಸೋನಿಯಾ ಗಾಂಧಿ ಏನು ತಪ್ಪು ಮಾಡಿದ್ದಾರೆ. ಯಾಕಿಷ್ಟು ಕಿರುಕುಳ ನೀಡುತ್ತಿದ್ದಾರೆ. ದೆಹಲಿಯಲ್ಲಿ ನಾವು ಕೂಡ ಬೆಂಬಲಕ್ಕೆ ಬಂದಿದ್ದೇವೆ ದೆಹಲಿಯಲ್ಲೂ ನಮ್ಮ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. :-- – -