: ವರುಣನ ಕೃಪೆ. ಶಾಲೆಗಳಿಗೆ ರಜೆ ಮೈಸೂರು, ಜು,19,2024: (..) ನಿರಂತರ ಮಳೆ ಹಿನ್ನಲೆ. ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ. ಶಾಲೆಗೆ ತೆರಳಲು ವಿದ್ಯಾರ್ಥಿಗಳಿಗೆ ಮಳೆ ಅಡ್ಡಿ ಹಿನ್ನೆಲೆ. ಇಂದು ಎಲ್ಲಾ ಶಾಲೆಗಳಿಗೆ (ಪ್ರಾಥಮಿಕ ಹಾಗೂ ಪ್ರೌಢ) ರಜೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ಶನಿವಾರ ಪೂರ್ಣ ತರಗತಿ ನಡೆಸುವಂತೆ ಶಾಲಾ ಮುಖ್ಯಶಿಕ್ಷಕರಿಗೆ ಶಿಕ್ಷಣ ಇಲಾಖೆ‌ ಸೂಚನೆ. ನಿರಂತರವಾಗಿ ಮಳೆ ಸುರಿಯುತ್ತಿರೋ ಹಿನ್ನಲೆ. ಮೈಸೂರಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ. ದಕ್ಷಿಣ ವಲಯ ಸೇರಿದಂತೆ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿದ್ದರೂ ಸರ್ಕಾರಿ ಆದೇಶಕ್ಕೆ ಕ್ಯಾರೆ ಎನ್ನದ ಕೆಲ ಖಾಸಗಿ ಶಾಲೆಗಳು. ಮಳೆಗೆ ರಜೆ ಘೋಷಣೆ ನಡುವೆಯೂ ಶಾಲೆ ನಡೆಸುತ್ತಿರುವ ಜಿಲ್ಲೆಯಲ್ಲಿನ ಕೆಲ ಖಾಸಗಿ ಸಂಸ್ಥೆ ಆಡಳಿತ ಮಂಡಳಿ. ಸರ್ಕಾರಿ ಆದೇಶಕ್ಕೂ ಬೆಲೆ ಇಲ್ವಾ ಎನ್ನುತ್ತಿದ್ದಾರೆ ಶಾಲಾ ವಿದ್ಯಾರ್ಥಿಗಳ ಪೋಷಕರು. : , , , ,