766: ಮೈಸೂರು ಊಟಿ ರಸ್ತೆ ಬಂದ್..! ಮೈಸೂರು, ಜು,19,2024: (..) ಕಬಿನಿ ಜಲಾನಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ. ನಂಜನಗೂಡು ಬಳಿ ಮೈಸೂರು ಊಟಿ ರಸ್ತೆ ಬಂದ್. ಮಲ್ಲನ ಮೂಲೆ ಬಳಿ ರಾಷ್ಟ್ರೀಯ ಹೆದ್ದಾರಿ ಜಲಾವೃತ. ರಾಷ್ಟ್ರೀಯ ಹೆದ್ದಾರಿ 766 ಸಂಪೂರ್ಣ ಬಂದ್. ಚಿಕ್ಕಯ್ಯನ ಛತ್ರ ಗ್ರಾಮದಿಂದ ಮಲ್ಲನ ಮೂಲೆ ಮಠದ ವರೆಗೆ ರಸ್ತೆ ಸಂಪೂರ್ಣ ಜಲಾವೃತ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಾತ್ಕಾಲಿಕ ನಿರ್ಬಂಧ. ಮೈಸೂರು ಊಟಿ ರಸ್ತೆ ಸಂಚಾರಕ್ಕೆ ಸವಾರ ಪರದಾಟ. ಬದಲಿ ಮಾರ್ಗಗಳ ಮೂಲಕ ಸಂಚಾರಕ್ಕೆ ಅವಕಾಶ. ಮೈಸೂರಿಂದ ನಂಜನಗೂಡು,ಗುಂಡ್ಲುಪೇಟೆ ಕಡೆ ಹೋಗುವ ವಾಹನಗಳು ತಾಂಡವಪುರದ ಬಳಿ ಎಡಕ್ಕೆ ತಿರುಗಿ ಕೆಂಪಿಸಿದ್ದನ‌ ಹುಂಡಿ,ಹೆಜ್ಜಿಗೆ ಮಾರ್ಗ ನಂಜನಗೂಡು ಸಂಚಾರಿಸಲು ಸೂಚನೆ. ಗುಂಡ್ಲುಪೇಟೆ,ನಂಜನಗೂಡಿನಿಂದ ಮೈಸೂರಿಗೆ ಬರುವ ವಾಹನಗಳು ಕಲ್ಲಹಳ್ಳಿ ಗೊದ್ದನಪುರದ ಮೂಲಕ ಹೊಸ ಸೇತುವೆ ಮೂಲಕ ಹೋಗಲು ಸೂಚನೆ. ಬದಲಿ ಮಾರ್ಗ ಹುಡುಕಿಕೊಂಡು ಹೋಗಲು ಪ್ರಯಾಣಿಕರ ಪರದಾಟ. : 766, -