ರೈತರ ಬೆಳೆಗೆ ಉತ್ತಮ ದರ ನಿಗದಿಯಾಗಬೇಕು-ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್. ಮೈಸೂರು,ಜೂನ್,17,2022(..):ರೈತರ ಬೆಳೆಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಉತ್ತಮ ದರದೊಂದಿಗೆ ಬೆಳೆ ಖರೀದಿ ಮಾಡಿದರೆ ನೇಗಿಲಯೋಗಿ ಬದುಕು ಹಸನಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಮೈಸೂರು ವಿಶ್ವ ವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆ ವತಿಯಿಂದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ದೇಶದಲ್ಲಿ ಕೃಷಿ ಮಾರುಕಟ್ಟೆಗಳನ್ನು ಏಕೀಕರಿಸುವುದು, ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಇಂದು ಎಪಿಎಂಸಿ ಮಾರುಕಟ್ಟೆ ಮತ್ತು ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು. ಇ-ನ್ಯಾಮ್ ಪ್ಲಾಟ್ಫಾರ್ಮ್, ಫಾರ್ಮ್ ಗೇಟ್ ಆಪರೇಷನ್ ಉತ್ತೇಜಿಸಲು ಎಫ್ಪಿಒ ಪರಿಚಯಿಸಿರುವುದು ಒಳ್ಳೆಯ ಬೆಳವಣಿಗೆ. ಭಾರತ ಕೃಷಿಯ ದೇಶವಾಗಿರುವುದರಿಂದ ಕೃಷಿ ಮಾರುಕಟ್ಟೆಯನ್ನು ಬೆಳೆಸಬೇಕು. ನಿರ್ದಿಷ್ಟ ಕೃಷಿ-ಮಾರುಕಟ್ಟೆ ನಿಯಮಾವಳಿಗಳ ಪ್ರಕಾರ ನಿರ್ವಹಿಸಬೇಕು. ಅದರ ಅಡಿಯಲ್ಲಿ ಸೂಚಿಸಲಾದ ಸರಕುಗಳ ಮಾರಾಟ ಮತ್ತು ಖರೀದಿಯನ್ನು ನಿರ್ದಿಷ್ಟ ಮಾರುಕಟ್ಟೆ ಪ್ರದೇಶಗಳು ಅಥವಾ ಯಾರ್ಡ್‌ ಗಳು ಹೆಚ್ಚು ಸ್ಥಾಪನೆ ಆಗಬೇಕು ಎಂದರು. ನಿಯಂತ್ರಿತ ಮಾರುಕಟ್ಟೆಗಳಿಗೆ ಮೂಲಸೌಕರ್ಯ ನೀಡಬೇಕು. ತಾಂತ್ರಿಕ ಸುಧಾರಣೆ ಜೊತೆಗೆ ಏಕ ಗವಾಕ್ಷಿ ಸೇವೆ ಒದಗಿಸಬೇಕು. ಸರಕುಗಳ ಆಗಮನ ಮತ್ತು ಬೆಲೆಗಳು, ವ್ಯಾಪಾರದ ಕೊಡುಗೆಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವ ಬಗ್ಗೆ ಅರಿವು ತುಂಬಾ ಮುಖ್ಯ. ಆನ್ ಲೈನ್ ಮಾರುಕಟ್ಟೆಯು ವಹಿವಾಟು ಬಗ್ಗೆಯೂ ತಿಳಿವಳಿಕೆ ಬೇಕು ಎಂದರು. ಜಿಕೆವಿಕೆ ಕೃಷಿ ವಿವಿಯ ಕೃಷಿ ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ಗಣಪತಿ ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸಬೇಕಾದರೆ, ಉತ್ಪಾದನೆ ಹಾಗೂ ಮಾರುಕಟ್ಟೆ ವಿಸ್ತರಣೆ ಮಾಡಬೇಕು. ಎಂಎಸ್ ಪಿ ದರದಂತೆ ಬೆಳೆಗಳನ್ನು ಖರೀದಿ ಮಾಡಬೇಕು.ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಬೇಕು ಎಂದರು. ಕೆಎಎಸ್ ಅಧಿಕಾರಿ ಡಾ.ಡಿ.ಬಿ.ನಟೇಶ್, ಪ್ರಾಧ್ಯಾಪಕಿ ಡಾ.ಎಂ.ಮೀರಾ ಸೇರಿದಂತೆ ಇತರರು ಇದ್ದರು. : -- -.. … ’ : , 17, 2022 (..): “ ,” . . , -, . - , “ , ,” , . , , . “ - . . . ,” . , . .. , , , , , “ . . .” . .. , . . . : / / /