ಮೈಸೂರು ವಿವಿ ಮತ್ತು ಕೋಲ್ಕತ್ತಾದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್‌ ನಡುವೆ ಸಂಶೋಧನಾ ಒಡಂಬಡಿಕೆ. ಮೈಸೂರು,ಜೂನ್,17,2022(..):ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕೋಲ್ಕತ್ತಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್‌ಯೊಂದಿಗೆ ಶುಕ್ರವಾರ ನಡೆದ ಒಡಂಬಡಿಕೆಗೆ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಹಿ ಹಾಕಿದರು. ನಂತರ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾನಿಲಯವು ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ವಿಶ್ವ ದರ್ಜೆಯ ಸಂಶೋಧನಾ ಸಂಸ್ಥೆಗಳೊಂದಿಗೆ ತಿಳುವಳಿಕೆ ಒಪ್ಪಂದವನ್ನು ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕೋಲ್ಕತ್ತಾದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್‌ಯೊಂದಿಗೆ ಮಾಡಿಕೊಂಡು ಈ ಒಪ್ಪಂದ ಐತಿಹಾಸಿಕವಾಗಿದೆ. ಈ ಸಂಸ್ಥೆಯನ್ನು 2007 ರಲ್ಲಿ ಭಾರತ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ಅಡಿಯಲ್ಲಿ ಸ್ಥಾಪಿಸಲಾಯಿತು. ಈ ಒಡಂಬಡಿಕೆ 5 ವರ್ಷಗಳ ಅವಧಿವರೆಗೆ ಇರುತ್ತದೆ ಎಂದರು. ಇದರಲ್ಲಿ ಎರಡೂ ಸಂಸ್ಥೆಗಳಲ್ಲಿನ ಸಂಶೋಧನಾ ಚಟುವಟಿಕೆಗಳು ಪರಸ್ಪರ ಪೂರಕವಾಗಿ ಕೆಲಸ ಮಾಡಲಾಗುತ್ತದೆ. ಸಹಕಾರಿ ಸಂಶೋಧನಾ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮಗಳು, ಅಧ್ಯಾಪಕರ ವಿನಿಮಯ ಕಾರ್ಯಕ್ರಮಗಳು, ಸಲಕರಣೆ ಸೌಲಭ್ಯಗಳ ಹಂಚಿಕೆ ಮತ್ತು ಜಂಟಿ ಸಂಶೋಧನಾ ಯೋಜನೆಗಳ ಸಲ್ಲಿಕೆಯನ್ನು ಅಭಿವೃದ್ಧಿಪಡಿಸುವ ಉದ್ದೇಶಗಳನ್ನು ಒಳಗೊಂಡಿದೆ. ಈ ಒಡಂಬಡಿಕೆ ಹಿಂದೆ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಪಾತ್ರ ಹೆಚ್ಚಿದೆ. ಇದು ಮುಂದಿನ ದಿನಗಳಲ್ಲಿ ಭಾಗವಹಿಸುವ ಸಂಸ್ಥೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಉನ್ನತೀಕರಿಸುತ್ತದೆ ಎಂದರು. ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮತ್ತು ಲಕ್ನೋದ ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ತಪಸ್ ಕುಂದು ಈ ಎರಡು ಸಂಸ್ಥೆಗಳನ್ನು ಒಪ್ಪಂದದಡಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ಪ್ರೊ. ಅರುಣ್ ಬಂಡೋಪಾಧ್ಯಾಯ (ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ, ಜಾದವ್ಪರ, ಕೋಲ್ಕತ್ತಾದ ನಿರ್ದೇಶಕ) ಮತ್ತು ಡಾ. ಗೋಪಾಲನ್ (ಹೈದರಾಬಾದ್ ನ ಪ್ರಸಿದ್ಧ ಫಾರ್ಮಾ ಕೈಗಾರಿಕೋದ್ಯಮಿ) , ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ, ಪ್ರೊ.ಎನ್.ಕೆ.ಲೋಕನಾಥ್, ಡಾ.ಎಸ್.ಚಂದ್ರನಾಯಕ್, ಡಾ.ಸಿ.ಡಿ.ಮೋಹನ್ ಮತ್ತು ಇತರ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು. : - - - . … , 17, 2022 (..): . . , -, , . , , “ . . , . 5- .”“ . , , , , . - . .. . ,” . . .. ’ . , .. ( , , ) . (’ ), . . , , , . .. , . . , . .. , .: /