ಔದ್ಯೋಗಿಕ ಜೀವನ ಆರಂಭಿಸಲು ವಿಶೇಷ ಕೌಶಲ್ಯಗಳು ಅವಶ್ಯಕ: ಮೈಸೂರು ವಿವಿ ಕುಲಸಚಿವ ಪ್ರೊ.ಶಿವಪ್ಪ. ಮೈಸೂರು,ಜೂನ್,16,2022(..):ಯಾವುದೇ ಪದವಿಗಳನ್ನು ಪೂರೈಸಿದ ವಿದ್ಯಾರ್ಥಿಗಳು ಕಂಪೆನಿಗಳು, ಸೇರಿದಂತೆ ನಾನಾ ದೊಡ್ಡ ಸಂಸ್ಥೆಗಳಲ್ಲಿ ಔದ್ಯೋಗಿಕ ಜೀವನ ಆರಂಭಿಸಲು ಕೆಲವೊಂದು ವಿಶೇಷ ಕೌಶಲ್ಯಗಳು ಬೇಕಾಗುತ್ತದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಸಚಿವ ಆರ್. ಶಿವಪ್ಪ ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಯುನಿವರ್ಸಿಟಿ ಇಂಡಸ್ಟ್ರಿ ಇಂಟ್ರಾಕ್ಷನ್ ಸೆಂಟರ್ ವತಿಯಿಂದ ಗುರುವಾರ ಮೈಸೂರು ವಿವಿ ಆವರಣದ ರಾಣಿ ಬಹದ್ದೂರು ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಟು ಕಾರ್ಪೋರೇಟ್ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಂಪೆನಿ, ಕೈಗಾರಿಕೆ ಚಟುವಟಿಕೆ ಮತ್ತು ವಿದ್ಯಾರ್ಥಿಗಳ ನಡುವೆ ಸಂಪರ್ಕ ಕಲ್ಪಿಸುವುದು ವಿಶ್ವವಿದ್ಯಾನಿಲಯದ ಪ್ರಮುಖ ಕಾರ್ಯವಾಗಿದೆ. ಇವುಗಳನ್ನು ದೊರಕಿಸಿಕೊಡುವುದು ವಿವಿಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಕ್ಯಾಂಪಸ್ ಟು ಕಾರ್ಪೋರೇಟ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಟೀಮ್ ವರ್ಕ್‌ ನ ಫಲಿತಾಂಶದ ಅರಿವು ಇರಬೇಕು. ಅದಕ್ಕಾಗಿ ಅಧ್ಯಯನ ಅವಧಿಯಲ್ಲಿ ಟೀಮ್ ವರ್ಕ್ ನಲ್ಲಿ ಪಾಲ್ಗೊಳ್ಳಬೇಕು. ಇದಲ್ಲದೇ ತಿಳಿದಿರುವ ಭಾಷೆಯಲ್ಲಿ ಹೇಳಬೇಕಾದ ವಿಷಯಗಳನ್ನು ಪರಿಣಾಮಕಾರಿಯಾಗಿ ಹೇಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೆಂದರು. ವಿದ್ಯಾರ್ಥಿಗಳು ಒಗ್ಗಟ್ಟು, ವಿಶ್ವಾಸಾರ್ಹತೆ ಬೆಳೆಸಿಕೊಳ್ಳಬೇಕು. ಮಾತ್ರವಲ್ಲದೇ ನಾನ್ ಟೆಕ್ನಿಕಲ್ ಸ್ಕಿಲ್ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಸಿಂಡಿಕೇಟ್ ಸದಸ್ಯೆ ಡಾ.ಚೈತ್ರಾ ನಾರಾಯಣ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎ.ಎಸ್. ಸತೀಶ್, ಯುನಿವರ್ಸಿಟಿ ಇಂಡಸ್ಟ್ರಿ ಇಂಟ್ರಾಕ್ಷನ್ ಸೆಂಟರ್ ನಿರ್ದೇಶಕ ಪ್ರೊ.ಬಿ.ಮಹದೇವಪ್ಪ, ಮಾನಸಗಂಗೋತ್ರಿ ಬಿಐಎಂಎಸ್ ಮುಖ್ಯಸ್ಥ ಪ್ರೊ.ಡಿ. ಆನಂದ್, ಸಂಪನ್ಮೂಲ ವ್ಯಕ್ತಿ ಹೇಮಲತಾ ಹಾಗೂ ಇತರರು ಇದ್ದರು. : - – - -. …. : . , 16, 2022 (..): “ , ,” . . , , . , “ ,” , . , , “ . .”“ . , . , , . , - ,” . . , .. , . . , . . , .: / /