ಕಾಂಗ್ರೆಸ್ ಗೆ ಕೇಡುಗಾಲ, ಪ್ರತಿಪಕ್ಷವಾಗಲು ನಾಲಾಯಕ್- ನಳಿನ್ ಕುಮಾರ್ ಕಟೀಲ್ ವಾಗ್ದಾಳಿ. ಚಾಮರಾಜನಗರ,ಜೂನ್,16,2022(..):ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ. ಈ ಕುರಿತು ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಗೆ ಕೇಡುಗಾಲ ಬಂದಿದೆ. ಪ್ರತಿಪಕ್ಷವಾಗಲೂ ಕಾಂಗ್ರೆಸ್ ನಾಲಾಯಕ್. ಕಾಂಗ್ರೆಸ್ ಗೆ ಕಾನೂನಿನ ಮೇಳೆ ನಂಬಿಕೆ ಇಲ್ಲ ಕಾನೂನಿನ ಆಧಾರದ ಮೇಲೆ ವಿಚಾರಣೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದವೂ ಇಡಿ ತನಿಖೆ ಮಾಡಿತ್ತು ಅವತ್ತು ಯಾರು ಹೋರಾಟ ಮಾಡಲಿಲ್ಲ. ಈಗ ಕಾಂಗ್ರೆಸ್ ಬೇರೆ ಬೇರೆ ಕಾರಣಗಳಿಗೆ ಹೋರಾಟ ಮಾಡುತ್ತಿದೆ. ಪ್ರಜಾಪ್ರಭುತ್ವ ಕಗ್ಗೋಲೆ ಮಾಡಿದ್ದು ಕಾಂಗ್ರೆಸ್ ಎಂದು ನಳೀನ್ ಕುಮಾರ್ ಕಟೀಲ್ ಕಿಡಿಕಾರಿದರು. : --- -