ಮುಂದಿನ ಸಿನಿಮಾಗಾಗಿ ವರ್ಕೌಂಟ್ ಶುರು ಮಾಡಿದ ರಾಕಿಂಗ್ ಸ್ಟಾರ್ ಬೆಂಗಳೂರು, ಜೂನ್ 16, 2022 (..):ನಟ ರಾಕಿಂಗ್ ಸ್ಟಾರ್ ಯಶ್ ಅವರು​ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ಆರಂಭಿಸಿದ್ದಾರೆ . ತಮ್ಮ 19ನೇ ಸಿನಿಮಾಗಾಗಿ ಯಶ್ ಕಸರತ್ತು ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.. ಈ ಬಗ್ಗೆ ಯಶ್ ಅವರ ಟ್ರೈನರ್ ಪಾನಿಪುರಿ ಕಿಟ್ಟಿ ರಿವೀಲ್ ಮಾಡಿದ್ದು, ತೂಕ ಇಳಿಸಲು ವರ್ಕ್​ಔಟ್​ ಮಾಡುತ್ತಿದ್ದಾರಂತೆ. ಹೊಸ ಸಿನಿಮಾದಲ್ಲಿ ಅವರ ಲುಕ್ ವಿಭಿನ್ನವಾಗಿರಲಿದೆಯಂತೆ, ಹಾಗಾಗಿ ಅದಕ್ಕೆ ಸೂಕ್ತವಂತೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಪಾತ್ರದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಯಶ್​ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರಂತೆ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಯಶ್​ ಮುಂದಿನ ಸಿನಿಮಾ ಕೆಜಿಎಫ್ 3 ಎಂಬ ಸುದ್ದಿ ಹರಿದಾಡುತ್ತಿದೆ. ಯಶ್​ ಸಿನಿಮಾದ ಪಾತ್ರಕ್ಕೆ ತಕ್ಕಂತೆ ಲುಕ್ ಚೇಂಜ್​ ಮಾಡಿಕೊಳ್ಳಲು ವರ್ಕೌಟ್​ ಸ್ಟಾರ್ಟ್​ ಮಾಡಿದ್ದಾರಂತೆ.