ಇದ್ದಕ್ಕಿದಂತೆ ಅನಾರೋಗ್ಯ: ಚಿಕಿತ್ಸೆ ಪಡೆದು ಶೂಟಿಂಗ್’ಗೆ ಮರಳಿದ ದೀಪಿಕಾ ಬೆಂಗಳೂರು, ಜೂನ್ 14, 2022 (..):ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶೂಟಿಂಗ್​ನಲ್ಲಿದ್ದಾಗ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ದೀಪಿಕಾ ಆರೋಗ್ಯದಲ್ಲಿ ಯಾವುದೇ ಏರುಪೇರಾಗಿಲ್ಲ ಎಂಬುದು ಖಚಿತವಾದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ಶೂಟಿಂಗ್​ನಲ್ಲಿ ಮತ್ತೆ ತೊಡಗಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆಗೆ ಕೊಂಚ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ತನ್ನ ಹೃದಯದ ಬಡಿತವು ಏರುಪೇರಾಗುತ್ತಿದೆ ಎಂದು ಅವರಿಗೆ ಅನಿಸತೊಡಗಿತ್ತು ಎನ್ನಲಾಗಿದೆ. ಆದರೆ ದೀಪಿಕಾ ಪಡುಕೋಣೆ ಅವರ ತಂಡದಿಂದ ಇದುವರೆಗೆ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ.