ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಪ್ರಭಾಸ್: ಮದುವೆಗೆ ಗ್ರೀನ್ ಸಿಗ್ನಲ್ ಬೆಂಗಳೂರು, ಜೂನ್ 11, 2022 (..): ಬಾಹುಬಲಿ ಹೀರೋ ಪ್ರಭಾಸ್ ಕೊನೆಗೂ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಸುದ್ದಿ ಹೊರಬಿದ್ದಿದೆ. ಹೌದು. ಪ್ರಭಾಸ್​ ಕುಟುಂಬದ ಮೂಲಗಳ ಪ್ರಕಾರ ಪ್ರಭಾಸ್​ ಮದುವೆಗೆ ಒಪ್ಪಿಗೆ ನೀಡಿದ್ದು, ಸದ್ಯದಲ್ಲಿಯೇ ಬಾಹುಬಲಿ ಹಸೆಮಣೆ ಏರಲಿದ್ದಾರೆ. ಈಗಾಗಲೇ ಪ್ರಭಾಸ್​ ಪೋಷಕರು ಅವರಿಗಾಗಿ ಹುಡುಗಿ ನೋಡಿದ್ದು, ಮನೆಯವರು ನೋಡಿದ ಹುಡುಗಿಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಹುಡುಗಿ ಸಿನಿಮಾ ರಂಗಕ್ಕೆ ಸಂಬಂಧ ಇಲ್ಲ ಎನ್ನಲಾಗಿದೆ. ಈ ಮೂಲಕ ಪ್ರಭಾಸ್ ಮದುವೆಯ ಬಗ್ಗೆ ಇದ್ದ ಊಹಾ ಪೋಹಾಗಳಿಗೆ ತೆರೆ ಬಿದ್ದಿದೆ. ಈ ಮೊದಲು ಹಲವಾರು ಬೇರೆ ಬೇರೆ ನಟಿಯರ ಜೊತೆ ಪ್ರಭಾಸ್​ ಹೆಸರು ಕೇಳಿ ಬಂದಿತ್ತು. ಅವರ ಜೊತೆ ಮದುವೆ, ಇವರ ಜೊತೆ ಮದುವೆ ಎಂದೆಲ್ಲಾ ಸುದ್ದಿ ಹರಿದಾಡಿತ್ತು.