ಸಲ್ಲು ಭಾಯ್’ಗೆ ಮತ್ತೆ ಜೀವ ಬೆದರಿಕೆ ಪತ್ರ ಬೆಂಗಳೂರು, ಜೂನ್ 08, 2022 (..):ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಅನಾಮಧೇಯ ಜೀವ ಬೆದರಿಕೆ ಪತ್ರ ಬಂದಿದೆ. ಜೂನ್ 5ರಂದು ಬೆದರಿಕೆ ಪತ್ರವನ್ನು ಬಂದಿದ್ದು, ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನಾಮಧೇಯ ಪತ್ರ ಬೆಳಕಿಗೆ ಬಂದ ನಂತರ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಅರಂಭಿಸಿದ್ದರು. ಮಹಾರಾಷ್ಟ್ರ ಗೃಹ ಇಲಾಖೆಯು ನಟ ಸಲ್ಮಾನ್ ಖಾನ್ ಅವರಿಗೆ ಮತ್ತು ಅವರ ತಂದೆ ಸಲೀಂ ಖಾನ್ ಅವರ ನಿವಾಸಕ್ಕೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿದೆ. ಈ ಹಿಂದೆಯೂ ಈ ರೀತಿಯ ಪತ್ರಗಳು ಬಂದಿದ್ದವು, ಇದೀಗ ಮತ್ತೆ ಬೆದರಿಕೆ ಪತ್ರ ಬಂದಿದ್ದು ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿತ್ತು. ಈ ಸಂಬಂಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.