ಪಂಚೆ ಧರಿಸಿ ಬಂದ ರೈತನಿಗೆ ಅಪಮಾನ : 7 ದಿನ ಜಿ.ಟಿ ಮಾಲ್ ಕ್ಲೋಸ್ ಮಾಡಿಸಲು ನಿರ್ಧಾರ ಬೆಂಗಳೂರು,ಜುಲೈ,18,2024 (..):ಪಂಚೆ ಧರಿಸಿ ಬಂದಿದ್ದಕ್ಕೆ ರೈತನಿಗೆ ಅಪಮಾನ ಮಾಡಿದ ಜಿ.ಟಿ ಮಾಲ್ ಅನ್ನು 7 ದಿನಗಳ ಕಾಲ ಮುಚ್ಚಿಸುತ್ತೇವೆ ಎಂದು ಸದನದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಘೋಷಣೆ ಮಾಡಿದ್ದಾರೆ. ಶಾಸಕರ ಒತ್ತಾಯ ಹಿನ್ನೆಲೆ ಈ ಕುರಿತು ಸದನದಲ್ಲಿ ಮಾತನಾಡಿದ ಸಚಿವ ಭೈರತಿ ಸುರೇಶ್, ಈಗಾಗಲೇ ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡಿದ್ದೇವೆ. ಕಾನೂನಿನಲ್ಲಿ ಅವಕಾಶವಿದೆ ಎಂದಿದ್ದಾರೆ. ಹೀಗಾಗಿ ಕ್ರಮ ಕೈಗೊಳ್ಳುತ್ತೇವೆ 7 ದಿನಗಳ ಕಾಲ ಜಿಟಿ ಮಾಲ್ ಮುಚ್ಚಿಸುತ್ತೇವೆ ಎಂದರು. ಪಂಚೆ ಧರಿಸಿ ಪುತ್ರನ ಜೊತೆ ಸಿನಿಮಾ ವೀಕ್ಷಣೆಗೆ ಬಂದಿದ್ದ ರೈತ ಫಕೀರಪ್ಪರನ್ನು ಜಿಟಿ ಮಾಲ್ ಸಿಬ್ಬಂದಿ ಒಳಕ್ಕೆ ಬಿಡದೆ ತಡೆದು ಅಪಮಾನಿಸಿದ್ದರು. ಈ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು ಈ ಬೆನ್ನಲ್ಲೆ ಜಿಟಿ ಮಾಲ್ ಮಾಲೀಕ ಘಟನೆಗೆ ಕ್ಷಮೆ ಕೋರಿ ರೈತ ಫಕೀರಪ್ಪರನ್ನು ಕರೆದು ಸನ್ಮಾನಿಸಿದ್ದರು. : , , , , ,