ಬರೋಬ್ಬರಿ 1800 ಥಿಯೇಟರ್’ಗಳಲ್ಲಿ ಚಾರ್ಲಿ 777 ರಿಲೀಸ್. ಬೆಂಗಳೂರು, ಜೂನ್ 08, 2022 (..):ರಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ ಬರೋಬ್ಬರಿ 1800 ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ. ಅಂದಹಾಗೆ 777 ಚಾರ್ಲಿ ಸಾಕಷ್ಟು ಪ್ರೀ-ರಿಲೀಸ್ ಕೂಡ ಸಾಕಷ್ಟು ಹೈಪ್ ಸೃಷ್ಟಿಸಿದೆ. ಈಗಾಗಲೇ ಕರ್ನಾಟಕ ಮತ್ತು ಭಾರತದಾದ್ಯಂತ 100 ಕ್ಕೂ ಹೆಚ್ಚು ಪ್ರೀಮಿಯರ್ ಶೋ ನಡೆಸಿದೆ. ವಿಶ್ವಾದ್ಯಂತ 1,800 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದೆ. ಅಂದಹಾಗೆ ಜೂನ್ 10 ರಂದು ಚಿತ್ರ ಬಿಡುಗಡೆಯಾಗುವ ಮೊದಲು ನಾವು ಕರ್ನಾಟಕದಲ್ಲಿಯೇ 100 ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದೇವೆ ಎಂದು ರಕ್ಷಿತ್ ಮಾಹಿತಿ ನೀಡಿದ್ದಾರೆ.