ದೇಶದಲ್ಲಿ ಒಂದೇ ದಿನ ಹೊಸದಾಗಿ 4,518 ಕೋವಿಡ್ ಪ್ರಕರಣಗಳು ಪತ್ತೆ. ನವದೆಹಲಿ,ಜೂನ್,6,2022(..):ದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಳವಾಗಿದ್ದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 4,518 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಈ ಕುರಿತುವ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ 4518 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ ಕೋವಿಡ್ ನಿಂದ 9 ಮಂದಿ ಮೃತಪಟ್ಟಿದ್ದಾರೆ. . ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 5,24,701 ಕ್ಕೆ ಏರಿಕೆಯಾಗಿದೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ 2,779 ಮಂದಿ ಕೊರೊನಾ ದಿಂದ ಗುಣಮುಖರಾಗಿದ್ದು, ಸದ್ಯ 25,782 ಸಕ್ರಿಯ ಪ್ರಕರಣಗಳಿವೆ. : 4,518 – – .