ಮಾನಸ ಗಂಗೋತ್ರಿ ಮೈಸೂರಿನ ಶ್ವಾಸಕೇಂದ್ರ: ಪ್ರೊ.ಜಿ.ಹೇಮಂತ್ ಕುಮಾರ್ ಮೈಸೂರು, ಜೂನ್ 05, 2020 (..):ಮೈಸೂರು ನಗರದ ಶ್ವಾಸಕೇಂದ್ರ ಆಗಿರುವ ಮಾನಸ ಗಂಗೋತ್ರಿ ಕ್ಯಾಂಪಸ್ ಸ್ವಚ್ಛಂದ ಹಸಿರು ಪರಿಸರವನ್ನು ಮುಂದೆಯೂ ಇದೇ ರೀತಿ ಸಂರಕ್ಷಣೆ ಮಾಡಿಕೊಂಡು ಹೋಗಬೇಕೆಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಸಲಹೆ ನೀಡಿದರು. ಮೈಸೂರಿನ ಮಾನಸ ಗಂಗೋತ್ರಿಯ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ ಮೆಂಟ್ ಸ್ಟಡಿ ವಿಭಾಗ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನಗರ ಕೇಂದ್ರದ ನಡುವೆ ನೂರಾರು ಎಕರೆ ಜಾಗದಲ್ಲಿ ಮಾನಸ ಗಂಗೋತ್ರಿ ವ್ಯಾಪಿಸಿದೆ. ಇಲ್ಲಿರುವ ಮರ, ಗಿಡಗಳಿಂದ ಕೂಡಿದ ಹಸಿರಿನ ವಾತಾವರಣದಿಂದಲೇ ಮೈಸೂರಿನ ಜನತೆ ಉತ್ತಮ ಗಾಳಿ ಸೇವಿಸಲು ಸಾಧ್ಯವಾಗುತ್ತಿದೆ. ಹಿಂದೆ ವಿಶ್ವವಿದ್ಯಾನಿಲಯದಿಂದ ಹಾಕಿಸಲಾದ ಗಿಡಗಳು ಇಂದು ಹೆಮ್ಮರವಾಗಿ ಬೆಳೆದು ವಿವಿ ಆವರಣದಲ್ಲಿ ತಂಪನ್ನು ಸೂಸುತ್ತಿವೆ. ಕ್ಯಾಂಪಸ್ ನಲ್ಲಿರುವ ಈ ವಾತಾವರಣವನ್ನು ಇದೇ ರೀತಿ ಕಾಪಾಡಿಕೊಂಡು ಹೋಗಬೇಕೆಂದು ತಿಳಿಸಿದರು. ಪರಿಸರ ದಿನಾಚರಣೆ ದಿನದಂದು ಪರಿಸರ ಸಂರಕ್ಷಣೆ, ಭೂಮಿ ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಎಲ್ಲರೂ ಆಲೋಚಿಸಬೇಕಿದೆ. ಹಿಂದೆ ಮನುಷ್ಯ ಮಾಡಿದ ಪರಿಸರ ವಿರೋಧಿ ಚಟುವಟಿಕೆಗಳಿಂದ ನಾನಾ ರೀತಿಯ ಅಪಾಯಗಳನ್ನು ಈಗ ಅನುಭವಿಸುತ್ತಿದ್ದೇವೆ. ಹೀಗಾಗಿ ಹಿಂದೆ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಬೇಕೆಂದು ಸಲಹೆ ನೀಡಿದರು. ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡಿ ನಿರ್ದೇಶಕ ಡಿ.ಎಂ. ಮಹೇಶ್, ಪ್ರಾಧ್ಯಾಪಕರಾದ ಮಂಗಳ, ಚೇತನ್, ಮೀರಾ ಹಾಗೂ ಇತರರು ಇದ್ದರು. … : . . , 5, 2022 (..): . . , -, . ‘ , , .“ , . . . . ,” .“ . - . , ,” . .. , , , , .: / / /