ಕೇವಲ ಮಾತಿನಲ್ಲಿ ಅರಣ್ಯ ರಕ್ಷಣೆ ಆಗುವುದಿಲ್ಲ: ಬಿ.ಪಿ.ರವಿ ಮೈಸೂರು, ಜೂನ್ 05, 2020 (..):ನಮ್ಮಲ್ಲಿ ಸದ್ಯ 3 ಮಿಲಿಯನ್ ಕಾಡು ಇದೆ. ಆದರ 17 ಮಿಲಿಯನ್ ಅರಣ್ಯ ಪ್ರದೇಶ ವ್ಯಾಜ್ಯ, ಒತ್ತುವರಿಯಲ್ಲಿ ಸಿಲುಕಿಕೊಂಡಿದೆ. ಅದು ಅರಣ್ಯ ಇಲಾಖೆಗೆ ಬಂದರೆ ಸಂರಕ್ಷಣೆ ಅನುಕೂಲವಾಗುತ್ತದೆ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು. ಮಾನಸ ಗಂಗೋತ್ರಿ ಪರಿಸರ ವಿಜ್ಞಾನ ವಿಭಾಗದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಣ್ಯ ಸಂರಕ್ಷಣೆ ಪುಸ್ತಕದಲ್ಲಿ ಇರುವುದಿಲ್ಲ. ಬರಿ ಮಾತಿನಲ್ಲಿ ಯಾವುದೇ ಅರಣ್ಯ ರಕ್ಷಣೆ ಆಗುವುದಿಲ್ಲ. ಮನೆಯಲ್ಲಿ ಕೂತರೆ ಯಾವುದೇ ಕೆಲಸ ಆಗುವುದಿಲ್ಲ. ಕ್ಷೇತ್ರ ಭೇಟಿ ಮಾಡಬೇಕು. ಸಾಕಷ್ಟು ಅಧ್ಯಯನ ನಡೆಸಬೇಕು. ಆಗ ಮಾತ್ರ ಅರಣ್ಯ ಸಂರಕ್ಷಣೆ ಮಾಡಬಹುದು. ಮೈಸೂರು ಮೃಗಾಲಯ ಸರಕಾರದ ಅನುದಾನದಿಂದ ನಡೆಯುತ್ತಿಲ್ಲ. ಝೂಗೆ ಭೇಟಿ ನೀಡುವ ಜನರಿಂದ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಒಂದಷ್ಟು ಸಮಸ್ಯೆ ಆಯಿತು. ಆದರೆ, ಸಾಕಷ್ಟು ದಾನಿಗಳು ನೆರವಿಗೆ ಮುಂದೆ ಬಂದರು ಎಂದರು. ಪರಿಸರ ಎಂದರೆ ಬರೀ ಕಾಡಲ್ಲ. ನಮ್ಮ ಸುತ್ತಮುತ್ತ ಇರುವ ಪ್ರದೇಶವೇ ಪರಿಸರ. ಈ ಪರಿಸರವನ್ನು ಸಂರಕ್ಷಣೆ ಮಾಡಬೇಕಿರುವುದು ಪ್ರತಿಯೊಬ್ಬರ ಹೊಣೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು ಎಂದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಭೂಮಿಗೆ ಚಿನ್ನಕ್ಕಿಂತ ಬೆಲೆ ಹೆಚ್ಚಿದೆ. ಇದನ್ನು ಕಳೆದುಕೊಳ್ಳಬಾರದು. ಮನುಷ್ಯ ಬದುಕಲು ಇರುವುದೊಂದೆ ಭೂಮಿ. ಇಂತಹ ಧರಣಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಹಲವು ಮಾಲಿನ್ಯಗಳಿಂದ ಪರಿಸರ ನಲುಗಿ ಹೋಗುತ್ತಿದೆ. ಇದನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಹಸಿ ಕಸ ಹಾಗೂ ಒಣ ಕಸವೆಂದು ಬೇರ್ಪಡಿಸುವ ಕಾರ್ಯ ಮೊದಲು ಮನೆಯಿಂದಲೇ ಆಗಬೇಕು. ಪ್ರವಾಸಕ್ಕೆ ಹೋದರೆ ಅಥವಾ ಕಾಡು, ನದಿ ಹತ್ತಿರ ಹೋದಾಗ ಪ್ಲಾಸ್ಟಿಕ್ ಸೇರಿದಂತೆ ಇತರರ ತ್ಯಾಜ್ಯಗಳನ್ನು ಎಸೆಯಬಾರದು. ಪ್ರಕೃತಿಯ ಒಂದು ಭಾಗ ಮನುಷ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ, ಕಳಕಳಿ ಇರಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಸಂರಕ್ಷಣೆ ಬಗ್ಗೆ ಹೇಳಿಕೊಡಬೇಕು ಎಂದು ಹೇಳಿದರು. ಡಾ.ಜಿ.ವಿ.ವೆಂಕಟರಾಮಣ, ಡಾ.ಎಸ್.ಶ್ರೀಕಂಠಸ್ವಾಮಿ, ಡಾ.ಎನ್.ಎಸ್.ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು. … “ ’ ”: .., 5, 2022 (..): “ 3 . , 17 . ,” ... , ‘ .’ “ ’ . ’ . . . . . . , ,” .“ . . . ,” . , . . , -, , “ . ’ . . , .”. .. , . ., . .. .: / /