ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ-ಬಹುಮಾನಗಳು ಪ್ರಕಟ. ಬೆಂಗಳೂರು,ಜೂನ್,4,2022(..):ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಇಂದು ಪ್ರಕಟಿಸಿದರು. ಇಂದು ನಡೆದ ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಈ ಪ್ರಶಸ್ತಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು ಸರ್ವಾನುಮತದಿಂದ ಪ್ರಶಸ್ತಿಗಳ ಆಯ್ಕೆ ಮಾಡಲಾಯಿತು. ವಿವರ ಕೆಳಕಂಡಂತಿದೆ. 2021ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ವಿಜೇತ ಪಟ್ಟಿ ಈ ಕೆಳಕಂಡಂತಿದೆ. ಅತ್ಯುತ್ತಮ ಪ್ರಕಾಶನ ಪ್ರಶಸ್ತಿ – ರೂ.1,00,000-00 – ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ – ರೂ.75,000-00 – ಡಾ. ಗುರುಲಿಂಗ ಕಾಪಸೆ, ಧಾರವಾಡ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ – ರೂ.50,000-00 – ಡಾ. ಮೋಹನ್ ಆಳ್ವ, ಮೂಡಬಿದರೆ ಡಾ|| ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ – ರೂ.25,000-00 – ಡಾ. ನಾ. ಸೋಮೇಶ್ವರ, ಬೆಂಗಳೂರು. 2021ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳ ವಿವರ ಪುಸ್ತಕ ಸೊಗಸು ಮೊದಲನೇ ಬಹುಮಾನ – ರೂ.25,000-00 ನಮ್ಮ ದೇಹದ ವಿಜ್ಞಾನ ಸಂ: ಡಾ. ಟಿ.ಆರ್. ಅನಂತರಾಮು ಡಾ. ನಾ. ಸೋಮೇಶ್ವರ ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರು ಪುಸ್ತಕ ಸೊಗಸು ಎರಡನೇ ಬಹುಮಾನ – ರೂ.20,000-00 ಅಜ್ಜಿ ಮನೆ ಸವಿ ಸಂ: ಉದ್ಯಾವರ ವಿಜಯಲಕ್ಷ್ಮಿ ಶೆಣೈ ವಿಶೇಷ ಪಬ್ಲಿಕೇಷನ್ಸ್, ಬೆಂಗಳೂರು ಪುಸ್ತಕ ಸೊಗಸು ಮೂರನೇ ಬಹುಮಾನ – ರೂ.10,000-00 ಮಹಾತ್ಮರ ಚರಿತಾಮೃತ ಲೇ: ಪ್ರಭುಚನ್ನಬಸವ ಸ್ವಾಮೀಜಿ ಶ್ರೀ ಗುರುಚನ್ನಬಸವೇಶ್ವರ ಗ್ರಂಥಮಾಲೆ, ಅಥಣಿ ಮಕ್ಕಳ ಪುಸ್ತಕ ಸೊಗಸು ಬಹುಮಾನ – ರೂ.8,000-00 ನೋಟ್ಬುಕ್ – ಮಕ್ಕಳ ಕಥೆಗಳು ಲೇ: ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಕವನ ಪ್ರಕಾಶನ, ಬಳ್ಳಾರಿ ಮುಖಪುಟ ಚಿತ್ರ ವಿನ್ಯಾಸ ಬಹುಮಾನ – ರೂ.10,000-00 ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ ಲೇ: ಡಾ. ಮುಜಾಫರ್ ಅಸ್ಸಾದಿ ಬಹುಮಾನಿತ ಕಲಾವಿದರು: ಜಿ. ಅರುಣ ಕುಮಾರ್ ಮುಖಪುಟ ಚಿತ್ರ ಕಲೆಯ ಬಹುಮಾನ – ರೂ.8,000-00 ರೂಬಿಕ್ಸ್ ಕ್ಯೂಬ್ ಮತ್ತಿತರ ನಾಟಕಗಳು ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ ಮತ್ತು ಆಯಾಮ ಲೇ: ಬೇಲೂರು ರಘುನಂದನ್ ಬಹುಮಾನಿತ ಕಲಾವಿದರು : ಮಂಜುನಾಥ ವಿ.ಎಂ. ಪುಸ್ತಕ ಮುದ್ರಣ ಸೊಗಸು ಬಹುಮಾನ – ರೂ.5,000-00 ಸಿರಿ ಬೆಳಕು ಲೇ: ಶಿ.ರಾ. ಹೂಗಾರ ಮುದ್ರಣಾಲಯ : ತ್ವರಿತ ಮುದ್ರಣ ಆಫ್ಸೆಟ್ ಪ್ರಿಂಟರ್ಸ್, ಗದಗ : 2021- –- .