ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜನೆ: ಪಠ್ಯದಿಂದ ಹೆಡ್ಗೆವಾರ್ ಭಾಷಣ ಕೈಬಿಡಲ್ಲ- ಸಿಎಂ ಬೊಮ್ಮಾಯಿ ಸ್ಪಷ್ಟನೆ. ಬೆಂಗಳೂರು,ಜೂನ್,4,2022(..):ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಸರ್ಜನೆ ಮಾಡಿದ್ದೇವೆ ಅಷ್ಟೆ, ರದ್ಧು ಮಾಡಿಲ್ಲ. ಪಠ್ಯದಿಂದ ಹೆಡ್ಗೆವಾರ್ ಭಾಷಣ ಕೈಬಿಡಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು. ಈ ಕುರಿತು ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹೊಸ ಸಮಿತಿ ರಚಿಸುವ ಅವಶ್ಯಕತೆ ಇಲ್ಲ. ಪರಿಷ್ಕರಣಾ ಸಮಿತಿ ಕೆಲಸ ಮುಗಿದ ಹಿನ್ನೆಲೆ ಸಮಿತಿ ವಿಸರ್ಜನೆ ಮಾಡಿದ್ದೇವೆ. . ನಮ್ಮದು ಬಸವಪಥದ ಸರ್ಕಾರ ಎಂದು ಮೊದಲೇ ಹೇಳಿದ್ದೇನೆ ಎಂದರು. ಪಠ್ಯದಲ್ಲಿ ಬಸವಣ್ಣನವರ ಒಂದು ಲೈನ್ ವ್ಯತ್ಯಾಸವಾಗಿದೆ. ಬಸವಣ್ಣನವರ ಪಠ್ಯದಲ್ಲಿನ ವ್ಯತ್ಯಾಸ ಸರಿಪಡಿಸುತ್ತೇವೆ. ಪಠ್ಯದಿಂದ ಹೆಗಡೆವಾರ್ ಭಾಷಣ ಕೈಬಿಡಲ್ಲ. ಶೀಘ್ರದಲ್ಲೇ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. : – - –--