ತಾಯಿ ಆಗುವ ಖುಷಿಯಲ್ಲಿ ಪ್ರಣೀತಾ: ಬೇಬಿ ಬಂಪ್ ಫೋಟೋ ಶೇರ್ ಮಾಡಿದ ನಟಿ ಬೆಂಗಳೂರು, ಜೂನ್ 03, 2022 (..):ನಟಿ ಪ್ರಣಿತಾ ಬೇಬಿ ಬಂಪ್‌ ಫೋಟೋ​ ಹಂಚಿಕೊಂಡಿದ್ದಾರೆ. ಬಾತ್‌ಟಬ್‌ನಲ್ಲಿ ಪೋಸ್​ ಕೊಟ್ಟ ನಟಿ ಅಭಿಮಾನಿಗಳಿಗೆ ತಾಯಿ ಆಗುವ ಖುಷಿ ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು, ಅವರು ಅನೇಕ ಬಾರಿ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಬಾತ್ ಟಬ್​ ನಲ್ಲಿ ಬೇಬಿ ಬಂಪ್ ಪೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಪ್ರಣಿತಾ 2020 ರಲ್ಲಿ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದರು. ಈಗ ಅವರು ತಮ್ಮ ಮೊದಲ ಮಗುವಿಗೆ ತುಂಬಾ ಉತ್ಸುಕರಾಗಿದ್ದಾರೆ. 2010 ರಲ್ಲಿ ‘ಪೋಕಿರಿ’ ಚಿತ್ರದ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪ್ರಣೀತಾ ಹಲವು ಸೌತ್ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದರು.