ಮೊಬೈಲ್ ಕೊಡಿಸದಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಮಗ. ಬೆಂಗಳೂರು,ಜೂನ್,3,2022(..):ಮೊಬೈಲ್ ಕೊಡಿಸದಿದ್ದಕ್ಕೆ ತನ್ನ ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೇಗೂರಿನ ಮೈಲಸಂದ್ರದಲ್ಲಿ ಈ ಘಟನೆ ನಡೆದಿದೆ. ತಾಯಿ ಫಾತಿಮಾ ಮೇರಿ ಪುತ್ರನಿಂದಲೇ ಕೊಲೆಯಾದವರು. ದೀಪಕ್ ಎಂಬುವವನೇ ಹತ್ಯೆಗೈದ ಮಗ. ಕಳೆದ 1 ವಾರದಿಂದ ಮೊಬೈಲ್ ಕೊಡಿಸುವಂತೆ ತಾಯಿ ಫಾತಿಮಾ ಮೇರಿಗೆ ದೀಪಕ್ ಒತ್ತಾಯಿಸುತ್ತಿದ್ದ. ಈ ನಡುವೆ ನಿನ್ನೆ ಕೂಡ ಮೊಬೈಲ್‌ ಕೊಡಿಸುವಂತೆ ತಾಯಿ ಜತೆ ಜಗಳವಾಡಿದ್ದ. ದುಡ್ಡಿಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ಫಾತಿಮಾ ಮೇರಿ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಪುತ್ರ ದೀಪಕ್ ​ನಿಂದ ಕತ್ತು ಹಿಸುಕಿ ತಾಯಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. : - - –-