ಚುನಾವಣೆ ಹತ್ತಿರ ಬಂದಾಗ ಗುಡುಗು ಸಿಡಿಲು ಸಹಜ- ಸಚಿವ ಕೋಟಾ ಶ್ರೀನಿವಾಸ ಪೂಜಾರಿ.. ಬೆಂಗಳೂರು.ಜೂನ್,2,2022(..):ಇತ್ತೀಚೆಗೆ ಸೃಷ್ಠಿಯಾಗಿರುವ ಕೆಲವು ವಿವಾದಗಳಿಗೆ ಚುನಾವಣೆಯೂ ಕಾರಣ. ಚುನಾವಣೆ ಹತ್ತಿರ ಬಂದಾಗ ಗುಡುಗು ಸಿಡಿಲು ಸಹಜ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಪಠ್ಯ ಪುಸ್ತಕ ವಿವಾದ ಕುರಿತು ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪಠ್ಯ ಪುಸ್ತಕದ ಬಗ್ಗೆ ಯಾಕೆ ಚರ್ಚೆಯಾಗುತ್ತಿದೆ. ಸರ್ಕಾರಗಳು ಕಾಲಕಾಲಕ್ಕೆ ಬದಲಾವಣೆ ಮಾಡಿವೆ. ನಮ್ಮ ಸರ್ಕಾರದಲ್ಲೂ ಕೆಲ ಬದಲಾವಣೆ ತಂದಿದೆ ಭಗತ್ ಸಿಂಗ್ ಪಠ್ಯ ತೆಗೆದಿದ್ದಾರೆ ಅಂತಾರೆ. ಆದರೆ ಭಗತ್ ಸಿಂಗ್ ಪಠ್ಯ ತೆಗೆದಿಲ್ಲ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದರು. ಇತ್ತೀಚೆಗೆ ಕೆಲವು ವಿವಾದ ಸೃಷ್ಠಿಯಾಗುತ್ತಿದೆ. ಇಂತಹ ಗೊಂದಲಕ್ಕೆ ಚುನಾವಣೆಯೂ ಕಾರಣ. ಚುನಾವಣೆ ಹತ್ತಿರ ಬಂದಾಗ ಗುಡುಗು ಸಿಡಿಲು ಸಹಜ. ಚುನಾವಣೆ ಬಳಕ ಎಲ್ಲವೂ ತಂಪಾಗುತ್ತದೆ. ಕೆಲವರಿಗೆ ಒಂದು ಸಮುದಾಯದ ವೋಟ್ ಕಳೆದುಕೊಳ್ಳುವ ಭಯ. ಅದಕ್ಕೆ ಕೆಲವರು ಆತಂಕದಿಂದ ವರ್ತಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು. : - - – -