ಹಾಡಿ ಜನರ ಮೇಲೆ ಸುಳ್ಳು ಕೇಸ್ ದಾಖಲು ಆರೋಪ: ಶಾಸಕ ಅನೀಲ್ ಚಿಕ್ಕಮಾದು ಅಹೋರಾತ್ರಿ ಧರಣಿ. ಮೈಸೂರು,ಜೂನ್,2,2022(..):ಹಾಡಿ ಜನರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂಬ ಅರೋಪಿಸಿ ವಲಯ ಅರಣ್ಯಾಧಿಕಾರಿ ವಿರುದ್ಧ ಹೆಚ್.ಡಿ ಕೋಟೆ ಶಾಸಕ ಅನೀಲ್ ಚಿಕ್ಕಮಾದು ಅಹೋರಾತ್ರಿ ಧರಣಿ ನಡೆಸಿದರು. ಬಂಡೀಪುರ ಅರಣ್ಯ ವ್ಯಾಪ್ತಿಯ ಮೊಳೆಯೂರು ವಲಯ ಕಚೇರಿಯಲ್ಲಿ ಅರಣ್ಯಾಧಿಕಾರಿ ಪುಟ್ಟರಾಜು ವಿರುದ್ಧ ಹಾಡಿ ಜನರೊಂದಿಗೆ ಶಾಸಕ ಅನಿಲ್ ಚಿಕ್ಕಮಾದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಜಿಂಕೆ‌ ಕೊಂದಿದ್ದಾರೆಂದು ಅರೋಪಿಸಿ ಅರಣ್ಯಾಧಿಕಾರಿಗಳು 16 ಮಂದಿ ಮೇಲೆ ದೂರು ದಾಖಲಿಸಿ ಇಬ್ಬರನ್ನು ಬಂಧಿಸಿದ್ದರು. ಎಚ್ ಡಿ ಕೋಟೆ ತಾಲೂಕಿನ ಕೆಬ್ಬೇಪುರ ಹಾಡಿ ಜನರ ಮೇಲೆ ದೂರು ದಾಖಲಿಸಿದ್ದರು. ಆದರೆ ಹಾಡಿಗೆ ಬಂದ ಜಿಂಕೆಯನ್ನು ನಾಯಿಗಳು ಕೊಂದಿವೆ ಎಂಬುದು ಹಾಡಿ ಜನರ ವಾದ. ಈ ಬಗ್ಗೆ ಸರಿಯಾಗಿ ವಿಚಾರಣೆ ನಡೆಸದೆ ದೂರು ದಾಖಲಿಸಿದ್ದಾರೆಂದು ಶಾಸಕ ಚಿಕ್ಕಮಾದು ಆರೋಪಿಸಿದ್ದಾರೆ. : - --- --