ಡಿಕೆ ಶಿವಕುಮಾರ್ ರಾಜ್ಯದ ಮುಂದಿನ ಸಿಎಂ ಆಗೋದು ಖಚಿತ – ಶಾಸಕ ರಂಗನಾಥ್ ತುಮಕೂರು,ಜೂನ್,1,2022(..):ಡಿ.ಕೆ.ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗೋದು ಖಚಿತ. ಕುಣಿಗಲ್ ಕ್ಷೇತ್ರದ ಶಾಸಕ ಡಾ.ಎಚ್​.ಡಿ.ರಂಗನಾಥ್ ಹೇಳಿಕೆ ನೀಡಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ರಸ್ತೆ ಸಮಸ್ಯೆ ಬಗ್ಗೆ ಹೇಳಿಕೊಂಡ ಜನರಿಗೆ ಸಮಸ್ಯೆ ಬಗೆಹರಿಸುವೆ ಎಂದ ಅಭಯ ನೀಡಿದ ಶಾಸಕ ರಂಗನಾಥ್, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವಂತೆ ನಿವೆಲ್ಲಾ ಕಾಂಗ್ರೆಸ್ ​ಗೆ ಮತ ಹಾಕಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ​ಗೆ ಸಪೋರ್ಟ್ ಮಾಡಿ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದನಂತರ ಕ್ಷೇತ್ರದ ಅಭಿವೃದ್ಧಿ ಖಂಡಿತಾ ಆಗುತ್ತೆ. ಅವರು ಸಿಎಂ ಆದ್ರೆ ಕುಣಿಗಲ್ ​ಗೆ ನಾನೇ ಮುಖ್ಯಮಂತ್ರಿ ಆದಂತೆ. ಎಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದಿದ್ದಾರೆ. ನಿಮ್ಮೂರಿಗೆ ರಸ್ತೆ ಸೇರಿದಂತೆ ಅಭಿವೃದ್ಧಿ ಕೆಲಸ ಮಾಡಲು ಕ್ರಮ ಕೈಗೊಳ್ಳುವೆ ಎಂದು ಎಂದ ಶಾಸಕ ರಂಗನಾಥ್ ಅವರ ದೃಶ್ಯ ವಿಡಿಯೋ ವೈರಲ್ ಆಗಿದೆ. : – - – --