ಡಾ.ರಾಜ್’ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ 8 ಮಂದಿ ಪಾಸ್ ಬೆಂಗಳೂರು, ಮೇ 31, 2022 (..):ಕೇಂದ್ರ ಲೋಕಸೇವಾ ಆಯೋಗ () ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ಪರೀಕ್ಷೆಯಲ್ಲಿ ಡಾ.ರಾಜ್​ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ 8 ಮಂದಿ ಕೂಡ ಸೇರಿಕೊಂಡಿದ್ದಾರೆ. ಡಾ.ರಾಜ್​ಕುಮಾರ್ ಅಕಾಡೆಮಿಯಿಂದ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಅಕಾಡೆಮಿ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದೆ. ಇದೇ ಈ ಬಾರಿ ಕೂಡ ಹಲವು ಮಂದಿ ಈ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಡಾ.ರಾಜ್​ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಿಂದ 8 ಮಂದಿ ತೇರ್ಗಡೆಯಾಗಿದ್ದಾರೆ. ಬೇನಕ ಪ್ರಸಾದ್ 92ನೇ , ಮೇಘನಾ ಕೆ ಟಿ 425, ರಾಜೇಶ್ ಪೊನ್ನಪ್ಪ 222, ಪ್ರೀತಿ ಪಂಚಾಲ್ 449, ಪ್ರಶಾಂತ್ ಕುಮಾರ್ ಬಿಓ 641, ರವಿನಂದನ್ ಬಿಎಂ 455, ನಿಖಿಲ್ ಬಿ ಪಾಟೀಲ್ 139ನೇ, ದೀಪಕ್ ಆರ್ ಸೇಟ್ 311ನೇ ಗಳಿಸಿದ್ದಾರೆ.