ರಾಜ್ಯಸಭೆ ಚುನಾವಣೆ: ಯಾರ ಜತೆಯೂ ಹೊಂದಾಣಿಕೆ ಇಲ್ಲ- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ. ಬೆಂಗಳೂರು,ಮೇ,31,2022(..): ರಾಜ್ಯಸಭೆ ಚುನಾವಣೆಯಲ್ಲಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ನಳೀನ್ ಕುಮಾರ್ ಕಟೀಲ್, ರಾಜ್ಯಸಭೆ ಚುನಾವಣೆಗೆ 3ನೇ ಅಭ್ಯರ್ಥಿ ಹಾಕಿದ್ದೇವೆ. ನಿರ್ಮಲಾ ಸೀತಾರಾಮನ್ ಮೊದಲ ಅಭ್ಯರ್ಥೀ 2ನೇ ಅಭ್ಯರ್ಥಿಯಾಗಿ ಜಗ್ಗೇಶ್ 3ನೇ ಅಭ್ಯರ್ಥೀ ಲೇಹರ್ ಸಿಂಗ್ ಕಣಕ್ಕೆ ಇಳಿಸಿದ್ದೇವೆ. ಹೀಗಾಗಿ ಯಾರ ಜತೆಯೂ ಮೈತ್ರಿ ಇಲ್ಲ ಎಂದು ತಿಳಿಸಿದರು. : -- - -