ರಾಜ್ಯದ ಅಭಿವೃದ್ಧಿಗಾಗಿಯೇ ಬಿಜೆಪಿ ಹುಟ್ಟಿದೆ: ವಿಪಕ್ಷಗಳಿಂದ ಶಾಂತಿ ಕದಡುವ ಯತ್ನ- ಸಚಿವ ಬಿ.ಸಿ ನಾಗೇಶ್. ಕೊಪ್ಪಳ,ಮೇ,28,2022(..):ಅಭಿವೃದ್ಧಿಯೇ ಬಿಜೆಪಿ ಮೂಲ ಉದ್ದೇಶ. ರಾಜ್ಯದ ಅಭಿವೃದ್ದಿಗಾಗಿಯೇ ಬಿಜೆಪಿ ಹುಟ್ಟಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು. ಕೊಪ್ಪಳದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಕಾಂಗ್ರೆಸ್ ಬ್ರಿಟೀಷ್ ಪಠ್ಯ ಕಲಿಸುತ್ತಾ ಹೋಗಿದೆ. ಭಾರತೀಯ ಇತಿಹಾಸ ಪರ ಇರುವುದು ಬಿಜೆಪಿ ಸರ್ಕಾರ. ಗುಣಮಟ್ಟ ಶಿಕ್ಷಣ ನೀಡಲು ಮುಂದಾಗಿದ್ದೇವೆ. ವಿಪಕ್ಷಗಳು ಅಶಾಂತಿ ಸೃಷ್ಠಿಸಲು ಮುಂದಾಗಿವೆ ಎಂದರು. ಮಂಗಳೂರು ಕಾಲೇಜಿನಲ್ಲಿ ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ ಬಿಸಿ ನಾಗೇಶ್, ಪದವಿ ಕಾಲೇಜುಗಳಲ್ಲಿ ಆಗಿರುವ ವಿವಾದ ಇದು. ಪ್ರೌಢ ಶಾಲೆ ಪಿಯು ಕಾಲೇಜುಗಳಲ್ಲಿ ಹಿಜಾಬ್ ಹಾಕಿಕೊಂಡು ಬರುವಂತಿಲ್ಲ. ಆದೇಶ ಪಾಲಿಸದಿದ್ದರೇ ಶಾಲೆಗೆ ಪ್ರವೇಶ ಇಲ್ಲ ಎಂದು ಬಿ.ಸಿ ನಾಗೇಶ್ ತಿಳಿಸಿದರು. : – – – - – .