ಪಠ್ಯ ಪುಸ್ತಕ ಮತ್ತು ಹಿಜಾಬ್ ಕುರಿತು ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ- ಶಿಕ್ಷಣ ಸಚಿವ ಬಿ.ಸಿ ನಾಗೇಶ್. ಕೊಪ್ಪಳ,ಮೇ,28,2022(..):ಪಠ್ಯ ಪುಸ್ತಕ ಮತ್ತು ಹಿಜಾಬ್ ಕುರಿತು ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಆರೋಪಿಸಿದರು. ಕೊಪ್ಪಳದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿಸಿ ನಾಗೇಶ್, ಈಗಾಗಲೇ ಶಾಲಾ ಪಠ್ಯಪುಸ್ತಕ ಮುದ್ರಣಗೊಂಡಿದೆ. ಪಠ್ಯ ಪುಸ್ತಕದಲ್ಲಿ ಇತಿಹಾಸ ರಾಷ್ಟ್ರೀಯತೆ ಇದೆ. ಆದರೆ ಕಾಂಗ್ರೆಸ್ ಇಲ್ಲಸಲ್ಲದ ಆರೋಪಗಳನ್ನ ಮಾಡಿ ಗೊಂದಲ ಮೂಡಿಸುತ್ತಿದೆ ಎಂದು ಕಿಡಿಕಾರಿದರು. ಮಂಗಳೂರು ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ, ಬಿ.ಸಿ ನಾಗೇಶ್, ಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಸಮವಸ್ತ್ರಕ್ಕೆ ಮಾತ್ರ ಅವಕಾಶವಿದೆ. ಈ ಬಗ್ಗೆ ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ ಎಂದರು. ಇದೇ ವೇಳೆ ಸಿದ್ಧರಾಮಯ್ಯಗೆ ಟಾಂಗ್ ನೀಡಿದ ಬಿ.ಸಿ ನಾಗೇಶ್, ಆರ್ ಎಸ್ ಎಸ್ ಇಟಾಲಿಯನ್ ಮೂಲವಲ್ಲ. ದೇಶದಲ್ಲಿ ಇಟಾಲಿಯನ್ ಮಾಡಲು ಹೋಗ್ತಿಲ್ಲ ಎಂದು ಕುಟುಕಿದರು. : - - –-- . … . : .. , 28, 2022 (..): .. . , . “ . ,” . , . “ . ,” .: .. / / / /