ದರ್ಗಾ ಬಿಟ್ಟು ಕೊಡುತ್ತೇವೆ ಅನ್ನೋದು ಕನಸು ಅಷ್ಟೆ- ತಾಂಬೂಲ ಪ್ರಶ್ನೆಗೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್. ಮಂಗಳೂರು,ಮೇ,28,2022(..): ಮಳಲಿ ಮಸೀದಿ ಕುರಿತು ತಾಂಬೂಲ ಪ್ರಶ್ನೆ ವಿರುದ್ಧ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಕ್ರೋಶ ವ್ಯಕ್ತಪಡಿಸಿದ್ದು ದರ್ಗಾ ಬಿಟ್ಟು ಕೊಡುತ್ತೇವೆ ಅನ್ನೋದು ಕನಸು ಅಷ್ಟೆ. ಮಸೀದಿಯ ಒಂದು ಹಿಡಿ ಮಣ್ಣನ್ನೂ ಕೊಡಲ್ಲ ಎಂದ್ದಿದ್ದಾರೆ. ಮಂಗಳೂರಿನಲ್ಲಿ ಇಂದು ಮಾತನಾಡಿದ ಎಸ್.ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್. ಮಸೀದಿ ನಿರ್ಮಿಸುವಾಗ ಬಹಣ ಸೂಕ್ಷ್ಮತೆ ಗಮನಿಸಲಾಗುತ್ತದೆ. ಶುದ‍್ಧ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗುತ್ತದೆ. ಈ ದೇಶ ನಮ್ಮದು ದೇಶಕ್ಕಾಗಿ ರಕ್ತ ಹರಿಸಿದ್ದೇವೆ .ದರ್ಗಾ ಬಿಟ್ಟು ಕೊಡುತ್ತೇವೆ ಅನ್ನೋದು ಕನಸು ಅಷ್ಟೆ. ಸಂಘ ಪರಿವಾರಕ್ಕೆ ತಾಕತ್ ಇದ್ದರೇ ತಾಂಬೂಲ ಪ್ರಶ್ನೆಯನ್ನ ಪ್ರಶ್ನಿಸಲಿ. ಅಷ್ಟಮಂಗಲಕ್ಕೆ ಒಂದು ಹಿಡಿ ಮಣ್ಣನ್ನೂ ಕೊಡಲ್ಲ. ಮಸೀದಿ ಬಿಟ್ಟುಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ ಎಂದರು. 2006ರಲ್ಲಿ ಸಂಡೂರಿನ ಸುಗ್ಗಲಮ್ಮ ದೇಗುಲ ಒಡೆದು ಹಾಕಿದ್ದರಲ್ಲ ಅದನ್ನ ಪ್ರಶ್ನಿಸಲಿ ಎಂದು ಟಾಂಗ್ ನೀಡಿದ ಅಬ್ದುಲ್ ಮಜೀದ್, ತಾಂಬೂಲ ಪ್ರಶ್ನೆ ಎಂದವರನ್ನ ಒದ್ದು ಒಳಗೆ ಹಾಕಬೇಕು. ಪೂಜಾ ಸ್ಥಳ ಕಾಯ್ದೆ 1991 ರ ಪ್ರಕಾರ ಒಳಗೆ ಹಾಕಬೇಕು ಎಂದರು. : – --- … : , 28, 2022 (..): . “’ . ’ ,” . , . . , . ’ , . .: / /