ವಿಧಾನಸಭಾ ಚುನಾವಣೆಯಲ್ಲಿ 50 ವರ್ಷದೊಳಗಿನವರಿಗೆ ಟಿಕೆಟ್ ನೀಡಲು ತೀರ್ಮಾನ- ಮಾಜಿ ಸಿಎಂ ಸಿದ್ಧರಾಮಯ್ಯ. ಶಿರಸಿ,ಮೇ,29,2022(..): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 50 ವರ್ಷದೊಳಗಿನವರಿಗೆ ಟಿಕೆಟ್ ನೀಡಲು ತೀರ್ಮಾನ ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದ್ದಾರೆ. ಶಿರಸಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ, ಯುವಕರಿಗೆ ಟಿಕೆಟ್ ನೀಡಲು ತೀರ್ಮಾನ ಮಾಡಿದ್ದೇವೆ. ಯಂಗ್ ಸ್ಟರ್ಸ್ ಇರಬೇಕೆಂಬ ಉದ್ದೇಶದಿಂದ 50 ವರ್ಷದೊಳಗುನ ವರಿಗೆ ಟಿಕೆಟ್ ನೀಡಲು ತೀರ್ಮಾನ ಮಾಡಿದ್ದೇವೆ ಎಂದರು. ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ತೀಟೆ ಮಾಡೋರು ಬಿಜೆಪಿಯವರೇ. ಹಿಜಾಬ್ ಹಲಾಲ್ ಮಾಂಸ ಹಿಂದಿನಿಂದಲೂ ಇದೆ .ಈಗ ವಿವಾದ ಯಾಕಾಯಿತು..? ಮಸೀದಿಯಲ್ಲಿ ಅಜಾನ್ ಕೂಗುದ್ರೆ ತಪ್ಪೇನು. ದೇವಸ್ಥಾನದಲ್ಲಿ ನೀವು ಹೋಗಿ ಪ್ರಾರ್ಥನೆ ಮಾಡಿಕೊಳ್ಳಿ. ಈ ಮುತಾಲಿಕ್ ಅವರನ್ನ ಹಿಡಿದು ಒಳಗೆ ಹಾಕೇಕು. ಮನುಷ್ಯರಾಗಿ ಬದುಕುವವರಿಗೆ ಏಕೆ ಹುಳಿ ಹಿಂಡುತ್ತೀರಿ ಎಂದು ಗುಡುಗಿದರು. : - – – –