ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ದುರಂತ: ವಾಟರ್ ಟ್ಯಾಂಕರ್ ಹರಿದು 3 ವರ್ಷದ ಬಾಲಕ ಸಾವು. ಬೆಂಗಳೂರು,ಮೇ,26,2022(..):ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆಯಷ್ಟೇ ಖಾಸಗಿ ಶಾಲಾ ಬಸ್ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಹೌದು ವಾಟರ್ ಟ್ಯಾಂಕರ್ ಹರಿದು ಮೂರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಸರ್ಜಾಪುರ ಸೆರಿನಿಟಿ ಲೇಔಟ್ ನಲ್ಲಿ ನಡೆದಿದೆ. ಮೂರು ವರ್ಷದ ಪ್ರತಿಷ್ಠ ಮೃತಪಟ್ಟ ಬಾಲಕ. ಶ್ವೇತಾ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಮುಂದೆ ಈ ಅವಘಡ ಸಂಭವಿಸಿದ್ದು, ನೀರನ್ನು ಅನ್ ಲೋಡ್ ಮಾಡಿ ಟ್ಯಾಂಕರ್ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಅಪಘಾತ ಸಂಭವಿಸಿದೆ. ನೀರಿನ ಟ್ಯಾಂಕರ್ ಹಿಂದೆ ಇದ್ದ ಬಾಲಕನನ್ನು ಗಮನಿಸದೇ ಚಾಲಕ ಟ್ಯಾಂಕರ್ ರಿವರ್ಸ್ ತೆಗೆದಿದ್ದು. ಟ್ಯಾಂಕರ್ ಚಕ್ರಕ್ಕೆ ಸಿಲುಕಿದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಕುರಿತು ಹೆಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : 3-- - – -