ಹಿಜಾಬ್ ಧರಿಸಿ ಶಾಲೆಗೆ ಹೋಗುವವರನ್ನ ಡಿಬಾರ್ ಮಾಡಲಿ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ವಿಜಯಪುರ,ಮೇ,26,2022(..):ರಾಜ್ಯದಲ್ಲಿ ತಣ್ಣಗಾಗಿದ್ದ ಹಿಜಾಬ್ ವಿವಾದ ಇದೀಗ ಮತ್ತೆ ಸದ್ಧು ಮಾಡುತ್ತಿದ್ದು, ಈ ನಡುವೆ ಹಿಜಾಬ್ ಧರಿಸಿ ಶಾಲೆಗೆ ಹೋಗುವವರನ್ನ ಡಿಬಾರ್ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಜಾಬ್ ಧರಿಸಿ ಶಾಲೆಗೆ ಹೋವಗುವವರನ್ನ ಡಿಬಾರ್ ಮಾಡಲಿ. ಇವರಿಗೆ ಸಂವಿಧಾನ ಕೋರ್ಟ್ ತೀರ್ಪಿನ ಬಗ್ಗೆ ಗೌರವ ಇಲ್ಲ. ಅವರಿಗೆ ತಮ್ಮ ಭವಿಷ್ಯ ಬೇಕಾಗಿಲ್ಲ. ಶಿಕ್ಷಣ ಬೇಕಾದ್ರೆ ಸಂವಿಧಾನ ಕೋರ್ಟ್ ಆದೇಶ ಪಾಲಿಸಬೇಕು ಎಂದರು. ರಾಜ್ಯದಲ್ಲಿರುವ ಎಲ್ಲಾ ಮದರಸಾ ಬಂದ್ ಮಾಡುವಂಯತೆ ಸಿಎಂಗೆ ಮನವಿ ಮಾಡಿದ ಶಾಸಕ ಯತ್ನಾಳ್, ಮದರಸಾಗಳಿಗೆ ಅನುಮತಿ ಕೊಟ್ಟಿದ್ರೆ ರದ್ದು ಮಾಡಲಿ. ಮದರಸಾದಲ್ಲಿ ಕಲಿಯುವುದು ದೇಶ ವಿರೋಧಿ ಚಟುವಟಿಕೆಗಳು ಎಂದು ಆರೋಪಿಸಿದರು. : – -- .