ತಡರಾತ್ರಿ ಊಟ ಇಲ್ಲ ಎಂದ ಹೋಟೆಲ್ ಗೆ ಬೆಂಕಿ ಹಚ್ಚಿದ ಅಪರಿಚಿತ ಗುಂಪು. ಕೊಪ್ಪಳ,ಮೇ,26,2022(..):ತಡರಾತ್ರಿ ಊಟ ಇಲ್ಲ ಎಂದ ಹೋಟೆಲ್ ಗೆ ಅಪರಿಚಿತ ಗುಂಪೊಂದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿರುವ ಹೋಟೆಲೊಂದಕ್ಕೆ ಅಪರಿಚತ ವ್ಯಕ್ತಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹೋಟೆಲ್‌ ಗುಡಿಸಲು ಮಾದರಿಯಲ್ಲಿದ್ದ ಕಾರಣ 11 ಕೊಠಡಿಗಳು ಬೆಂಕಿಗೆ ಆಹುತಿಯಾಗಿವೆ. ತಡರಾತ್ರಿ ಅಪರಿಚಿತರ ಗುಂಪು ಹೋಟೆಲ್‌ ಗೆ ಬಂದು ಊಟ ಕೇಳಿದ್ದು. ಈ ವೇಳೆ ಹೋಟೆಲ್‌ ನವರು ಇಷ್ಟು ಹೊತ್ತಲ್ಲಿ ಊಟ ಸಿಗುವುದಿಲ್ಲ ಎಂದಿದ್ದಾರೆ. ಇದರಿಂದ ಕೋಪಗೊಂಡ ದುಷ್ಕರ್ಮಿಗಳು ಹೋಟೆಲ್‌ ಗೇ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಹೋಟೆಲ್ ​ಗಿದ್ದ ನೀರಿನ ಸಂಪರ್ಕ ಕಡಿತಗೊಳಿಸಿ ಬೆಂಕಿ ಹಚ್ಚಿದ್ದು, ಇದರಿಂದ ಹೋಟೆಲ್‌ ಗುಡಿಸಲು ಮಾದರಿಯಲ್ಲಿದ್ದ ಕಾರಣ 11 ಕೊಠಡಿಗಳು ಬೆಂಕಿಗೆ ಆಹುತಿಯಾಗಿವೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ. : – – – - -