ಖಾಸಗಿ ಶಾಲಾ ಬಸ್ ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೇ ಸಾವು. ಬೆಂಗಳೂರು,ಮೇ,26,2022(..):ಖಾಸಗಿ ಶಾಲಾ ಬಸ್ ಡಿಕ್ಕಿಯಾಗಿ 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಬನಶಂಕರಿ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ಹಾರೋಹಳ್ಳಿ ನಿವಾಸಿ ಕೀರ್ತನ(16) ಮೃತಪಟ್ಟ ಬಾಲಕಿ. ಸ್ನೇಹಿತರಾದ ಹರ್ಷಿತಾ, ದರ್ಶನ್‌ ಜತೆ ಕೀರ್ತನಾ ತ್ರಿಬಲ್‌ ರೈಡಿಂಗ್‌ ನಲ್ಲಿ ಹೋಗುತ್ತಿದ್ದರು. ಈ ವೇಳೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಗೆ ಸೇರಿದ ಬಸ್ ಬೈಕ್ ಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಈ ವೇಳೆ ಸ್ಥಳದಲ್ಲೇ ಬಾಲಕಿ ಕೀರ್ತನ ಸಾವನ್ನಪ್ಪಿದ್ದು ಈ ಕುರಿತು ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – –- -