ಲವ್ ಜಿಹಾದ್ ಗೆ ಯುವತಿ ಬಲಿ…? ಉಡುಪಿ,ಮೇ,26,2022(..):ಉಡುಪಿಯಲ್ಲಿ ಲವ್‌ ಜಿಹಾದ್‌ ಕೇಳಿ ಬಂದಿದ್ದು, ಮುಸ್ಲೀಂ ಸಮುದಾಯದ ಯುವಕನೊಬ್ಬ ತಾನು ಮದುವೆಯಾಗಿದ್ದರೂ ಹಿಂದೂ ಧರ್ಮಕ್ಕೆ ಸೇರಿದ ಯುವತಿ ಜತೆ ಪ್ರೀತಿ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿ ಮತಾಂತರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಕುಂದಾಪುರದ ಉಪ್ಪಿನ ಕುದ್ರುವಿನಲ್ಲಿ ಈ ಘಟನೆ ನಡೆದಿದ್ದು ಅಜೀಜ್ ಎಂಬ ಯುವಕನ ವಿರುದ್ಧವೇ ಈ ಆರೋಪ ಕೇಳಿ ಬಂದಿದೆ. ಶಿಲ್ಪ ಎಂಬ ಯುವತಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಈಕೆಯ ಜೊತೆ ಪ್ರೀತಿ ಹೆಸರಿನಲ್ಲಿ ಅಜೀಜ್ ದೈಹಿಕ ಸಂಪರ್ಕ ಬೆಳೆಸಿ ಮತಾಂತರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮೊದಲ ಮದುವೆಯನ್ನ ಮುಚ್ಚಿಟ್ಟು ಶಿಲ್ಪಳಿಗೆ ಮದುವೆಯಾಗುವುದಾಗಿ ನಂಬಿಸಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಯುವತಿ ಶಿಲ್ಪ ಮೂರು ದಿನದ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ . ಇನ್ನೂ ಹಿಂದೂ ಪರ ಸಂಘಟನೆಗಳು ಈ ಬಗ್ಗೆ ಗಂಭಿರ ಆರೋಪ ಮಾಡಿದ್ದು, ಅಜೀಜ್ ಈ ಹಿಂದೆ ಮದುವೆಯಾಗಿದ್ದು, ಮದುವೆಯಾಗಿದ್ದರು ಕೂಡ ಮೃತ ಯುವತಿ ಶಿಲ್ಪಾಳಿಗೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಕುಂದಪುರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : – ---