ವಿಧಾನ ಪರಿಷತ್ ಚುನಾವಣೆ: ನಾನು ಟಿಕಟ್ ಆಕಾಂಕ್ಷಿಯಾಗಿರಲಿಲ್ಲ- ಸಿಎಂ ಇಬ್ರಾಹಿಂ. ಬೆಂಗಳೂರು,ಮೇ,24,2-22(..)ಜೂನ್ 3 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಿಸಿದ್ದರೇ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿ. ಈ ಮಧ್ಯೆ ಜೆಡಿಎಸ್ ಸಹ ಇಂದು ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳನ್ನ ಘೋಷಿಸಲಿದೆ. ಈ ಕುರಿತು ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ನಾನು ವಿಧಾನ ಪರಿಷತ್ ಚುನಾವಣಾ ಆಕಾಂಕ್ಷಿಯಾಗಿಲ್ಲ ಈಗ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ. ನಡೆಯಲಿದೆ. ಸಭೆ ಬಳಿಕ 11.30ಕ್ಕೆ ಜೆಡಿಎಸ್ ಅಭ್ಯರ್ಥಿಯ ಹೆಸರು ಘೋಷಿಸಲಾಗುತ್ತದೆ ಎಂದರು. : - -.- .