ಮಳೆ ಹಾನಿ ಟಾಸ್ಕ್ ಫೋರ್ಸ್ ರಚಿಸಿ ವಿದೇಶಕ್ಕೆ ಹೊರಟ ಸಿಎಂ ಬೊಮ್ಮಾಯಿ ಬೆಂಗಳೂರು, ಮೇ 22, 2022 (..):ಮಳೆ ಹಾನಿ ತಡೆಯಲು ಟಾಸ್ಕ್​ ಫೋರ್ಸ್ ರಚಿಸಿ ಸಿಎಂ ಬಸವರಾಜ ಬೊಮ್ಮಾಯಿ ಅದೇಶ ಹೊರಡಿಸಿದ್ದಾರೆ. ಮಳೆಯಿಂದ ಉಂಟಾದ ಹಾನಿ ತಡೆಯಲು ರಾಜ್ಯ ಸರ್ಕಾರ ಸಚಿವರ ನೇತೃತ್ವದಲ್ಲಿ ಮಳೆ ವಿಪತ್ತು ನಿರ್ವಹಣೆಗೆ 8 ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ಬೆಂಗಳೂರು ಎಂಟು ವಲಯಗಳ ಜವಾಬ್ದಾರಿಯನ್ನು ಸಪ್ತ ಸಚಿವರಿಗೆ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ರಾಜ್ಯ ಸರ್ಕಾರ. ಶಾಸಕರು, ಸಂಸದರು, ಅಧಿಕಾರಿಗಳನ್ನೊಳಗೊಂಡ ವಲಯವಾರು ಟಾಸ್ಕ್ ಫೋರ್ಸ್​ಗಳಿಗೆ ಸಚಿವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಯಾರಿಗೆ ಯಾವ ವಲಯದ ಉಸ್ತುವಾರಿ? ದಕ್ಷಿಣ ವಲಯ ಟಾಸ್ಕ್ ಫೋರ್ಸ್​- ಸಚಿವ ಆರ್. ಅಶೋಕ್ ಅಧ್ಯಕ್ಷತೆ ಪೂರ್ವ ವಲಯ ಟಾಸ್ಕ್ ಫೋರ್ಸ್​- ಸಚಿವ ಡಾ.ಅಶ್ವಥ್ ನಾರಾಯಣ್ ಅಧ್ಯಕ್ಷತೆ ಪಶ್ಚಿಮ ವಲಯ ಟಾಸ್ಕ್ ಫೋರ್ಸ್ ಜವಾಬ್ದಾರಿ – ಸಚಿವ ವಿ. ಸೋಮಣ್ಣ ಆರ್ ಆರ್ ನಗರ ವಲಯ ಜವಾಬ್ದಾರಿ – ಎಸ್. ಟಿ. ಸೋಮಶೇಖರ್ ಮಹದೇವಪುರ ವಲಯ ಟಾಸ್ಕ್ ಫೋರ್ಸ್ ಅಧ್ಯಕ್ಷತೆ – ಬೈರತಿ ಬಸವರಾಜ್ ಬೊಮ್ಮನಹಳ್ಳಿ ವಲಯ ಜವಾಬ್ದಾರಿ – ಗೋಪಾಲಯ್ಯ ಯಲಹಂಕ ಮತ್ತು ದಾಸರಹಳ್ಳಿ ಎರಡೂ ವಲಯಗಳ ಟಾಸ್ಕ್ ಫೋರ್ಸ್ ಅಧ್ಯಕ್ಷತೆ – ಮುನಿರತ್ನ 15ದಿನಗಳಕಾಲಅಧಿಕಾರಿಗಳಿಗೆರಜೆಇಲ್ಲಅಗತ್ಯ ತುರ್ತು ಸಂದರ್ಭಗಳಲ್ಲಿ ಹಣ ಬಳಕೆ ಮಾಡಬಹುದಾಗಿದೆ. ಜಿಲ್ಲಾಧಿಕಾರಿಗಳು ಮಳೆಯಿಂದ ಹಾನಿ‌ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಬೇಕು. ಮೂರು ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. 15 ದಿನಗಳ ಕಾಲ ಅಧಿಕಾರಿಗಳಿಗೆ ರಜೆ ನೀಡಬೇಡಿ. ಮಳೆಯಿಂದ ಉಂಟಾದ ಹಾನಿ ಸರಿಪಡಿಸಲು ಸಮಾರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.