ಎಸ್ .ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕೀಯರದ್ಧೇ ಮೇಲುಗೈ. ಬೆಂಗಳೂರು,ಮೇ,19,2022(..):ರಾಜ್ಯದ 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಶೇ. 85.63 ರಷ್ಟು ಫಲಿತಾಂಶ ಬಂದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸುದ್ಧಿಗೋಷ್ಠಿ ನಡೆಸಿ ಎಸ್.ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದರು. ಒಟ್ಟು 7,30,881 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. 3,72,279 ಬಾಲಕೀಯರು ಹಾಗೂ 3,58 602 ಬಾಲಕರು ಪಾಸ್ ಆಗಿದ್ದು ಈ ಮೂಲಕ ಶೇ.85.63ರಷ್ಟು ಫಲಿತಾಂಶ ಬಂದಿದೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ. ಶೇ. 90.29 ರಷ್ಟು ಬಾಲಕಿಯರು, ಶೇ. 81.30 ರಷ್ಟು ಬಾಲಕರು ಪಾಸ್ ಆಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದವರು 8,53,436 ವಿದ್ಯಾರ್ಥಿಗಳು ಈ ಪೈಕಿ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ಪೂರಕ ಪರೀಕ್ಷೆ ಜೂನ್ 27ರಂದು ನಡೆಯಲಿದೆ. : - --- … : , 19, 2022 (..): 2021-22 , 85.63. .. . 7,30,881 . . 3,72,279 , 3,58,602. 90.29 81.30%. 8,53,436 , 7,30,881 . 27.: / /