ಇಡೀ ಅವನ ಜೀವನವೆಲ್ಲಾ ಹಿಟ್ ಅಂಡ್ ರನ್ : ಹೆಚ್.ಡಿಕೆ ವಿರುದ್ದ ಡಿ.ಕೆ ಶಿವಕುಮಾರ್ ವಾಗ್ದಾಳಿ ಬೆಂಗಳೂರು,ಜುಲೈ, 15,2024 (..):ಕಸದ ಟೆಂಡರ್ ನಲ್ಲೂ ಕಿಕ್ ಬ್ಯಾಕ್ ಪಡೆದಿದ್ದಾರೆಂದು ತಮ್ಮ ವಿರುದ್ದ ಆರೋಪಿಸಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಈಕುರಿತು ಮಾತನಾಡಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಡಿ.ಕೆ ಶಿವಕುಮಾರ್, ಇಡೀ ಅವನ ಜೀವನವೆಲ್ಲಾ ಹಿಟ್ ಅಂಡ್ ರನ್. ಕಸದ ಲಾರಿ ಹೊಡೀತಿದ್ದಅವನು. ಕಿಂಗ್ ಆಫ್ ಕರೆಪ್ಷನ್ ಯಾರು ಅಂತ ಗೊತ್ತಿದೆ. ಅಸೆಂಬ್ಲಿಯಲ್ಲಿ ಅವರ ಶಾಸಕರು ಬಂದು ಮಾತನಾಡಲಿ. ಅವರ ಶಾಸಕರು ಇದ್ದಾರಲ್ಲ ಅವರು ಬಂದು ಮಾತನಾಡಲಿ. ಇವರ ಹಿಂದೆನ ಚರಿತ್ರೆಯನ್ನೆಲ್ಲ ತೆಗೆಯುತ್ತೇನೆ ಎಂದು ಗುಡುಗಿದರು. ಕುಮಾರಸ್ವಾಮಿ ಯಾವುದಾದರೂ ಟಿವಿಗೆ ಬಂದು ಚರ್ಚೆ ಮಾಡಲಿ ಹಿಟ್ ಅಂಡ್ ರನ್ ಕೇಸ್ ಡಿಕೆ ಶಿವಕುಮಾರ್ ಮಾಡಲ್ಲ. ಅಸೆಂಬ್ಲಿಯಲ್ಲಿ ಅವರ ಮೆಂಬರ್ ಇದ್ದಾರಲ್ಲ ಅಸೆಂಬ್ಲಿಗೆ ಬಂದು ಮಾತನಾಡಲು ಹೇಳಿ. ರಸ್ತೆಯಲ್ಲಿ ಮಾತನಾಡುವುದಕ್ಕೆ ಅಲ್ಲ. ದಾಖಲೆ ಉಳಿದುಕೊಳ್ಳಬೇಕು. ಹಿಟ್ ಅಂಡ್ ರನ್ ಮಾಡೊದಲ್ಲ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು. : , ,