ಮಳೆ ಹಾನಿ ಪ್ರದೇಶಕ್ಕೆ ಸಿಎಂ ಬೊಮ್ಮಾಯಿ ಭೇಟಿ, ಪರಿಶೀಲನೆ: ಮನೆ ಹಾನಿಗೊಳಗಾದವರಿಗೆ 25 ಸಾವಿರ ರೂ ಪರಿಹಾರ ಘೊಷಣೆ. ಬೆಂಗಳೂರು,ಮೇ,18,2022(..):ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಮನೆಗಳಿಗ್ಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಿಟಿ ರೌಂಡ್ಸ್ ಹಾಕಿ ಮಳೆಹಾನಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು. ಹೊಸಕೆರೆಹಳ್ಳಿ ಬಳಿಯ ಮಳೆಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಚಿವ ಆರ್.ಅಶೋಕ್. ಶಾಸಕ ಸಿಟಿ ರವಿ ಸೇರಿ ಹಲವರು ಸಾಥ್ ನೀಡಿದರು. ಈ ವೇಳೆ ಜನರು ಸಿಎಂ ಬೊಮ್ಮಾಯಿ ಬಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮಳೆಯಿಂದ ಹಾನಿಯಾದ ಮನೆಗಳಿಗೆ 25 ಸಾವಿರ ರೂ. ಪರಿಹಾರ ನೀಡುತ್ತೇವೆ. ಹಾಗೆಯೇ ಮಳೆಯಿಂದ ಮೃತಪಟ್ಟ ಕಾರ್ಮಿಕರಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು. ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಭಾರೀ ಮಳೆಗೆ ನಗರದ ಜನ ಜೀವನ ಅಸ್ತವ್ಯಸ್ಥವಾಗಿದೆ. ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಹೀಗಾಗಿ ನೀರು ನುಗ್ಗಿರುವ ಮನೆಗಳಿಗೆ 25 ಸಾವಿರ ರೂಪಾಯಿ ಪರಿಹಾರ ನೀಡುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಈ ಅವಾಂತರಕ್ಕೆ ಏನು ಕಾರಣ ಎಂದು ಚರ್ಚಿಸುತ್ತೇವೆ. ಎಲ್ಲ ರಾಜಕಾಲುವೆಗಳನ್ನ ಮುಕ್ತಗೊಳಿಸುವ ಕಾಮಗಾರಿ 1 ವರ್ಷದಲ್ಲಿ ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು. : - – - –- . ….. - , : . 25k , 18, 2022 (..): . . . - . . , .. . . . 25,000 , . 5 . , , “ . - . . 25,000 ,” . , “ . .”: / / / - / /