ಎಲ್ಲಾ ಸಮಸ್ಯೆಗೂ ಬುದ್ಧನ ಚಿಂತನೆ ಪರಿಹಾರ- ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮೈಸೂರು,ಮೇ,16,2022(..):ಜಗತ್ತಿನಲ್ಲಿ ಇಂದು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಬುದ್ಧನ ಚಿಂತನೆ ಪರಿಹಾರ ಒದಗಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮತ್ತು ಸಮಾನತೆ ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ 2566ನೇ ಬುದ್ಧ ಪೂರ್ಣಿಮೆ ಪ್ರಯುಕ್ತ ಸಮಕಾಲೀನ ಜಗತ್ತಿಗೆ ಬುದ್ಧನ ಚಿಂತನೆಗಳು ಎಂಬ ವಿಷಯದ ಬಗ್ಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಮಾಜದಲ್ಲಿ ನಾವು ಯಾವ ರೀತಿ ಬದುಕಬೇಕೆಂಬುದನ್ನು ಬುದ್ಧ ಮಾರ್ಗ ತಿಳಿಸಿಕೊಡುತ್ತದೆ. ಬುದ್ಧ ಜಗತ್ತಿಗೆ ಬೆಳಕು. ಈ ಬಾರಿ ಬುದ್ಧಪೂರ್ಣಿಮೆ ಆಚರಿಸಲು ಎರಡು ವಿಶೇಷ ಕಾರಣ ಇದೆ. ಮೊದಲನೆಯದು ಮೈವಿವಿಯಲ್ಲಿ ಬುದ್ಧ ಅಧ್ಯಯನ ಕೇಂದ್ರ ಸ್ಥಾಪನೆ ಆಗುತ್ತಿರುವುದು. ಮತ್ತೊಂದು ಶ್ರೀನಿವಾಸ ಪ್ರಸಾದ್ ಅವರ ಪ್ರತಿಷ್ಠಾನದಿಂದ ಈ ‌ಕಾರ್ಯಕ್ರಮ ಆಯೋಜಿಸುತ್ತಿರುವುದು. ಬುದ್ಧ ಶಾಂತಿ ಎಲ್ಲೆಡೆ ಪಸರಿಸಬೇಕಿದೆ ಎಂದರು. ಮಾನವ ತಲ್ಲಣಗಳಿಗೆ ಬುದ್ಧ ಗುರುವಿನ ಚಿಂತನೆಗಳು ಪರಿಹಾರ ಸೂಚಿಸುತ್ತದೆ. ಆದರೆ, ಮಾನವ ಬುದ್ಧಗುರುವಿನ ಚಿಂತನೆಗಳಿಂದ ದೂರ ಉಳಿದಿದ್ದಾನೆ. ಇದರಿಂದ ಅನೇಕ ಸಮಸ್ಯೆಗಳು ಅವನನ್ನು ಕಾಡುತ್ತಿದೆ. ಬುದ್ಧನ ಚಿಂತನೆ ಅಳವಡಿಸಿಕೊಂಡು ಸಾಕಷ್ಟು ರಾಷ್ಟ್ರಗಳು ಉತ್ತಮ ಮಾರ್ಗದಲ್ಲಿ ನಡೆಯುತ್ತಿವೆ. ಅದು ನಮಗೆ ಸ್ಪೂರ್ತಿ ಆಗಬೇಕೆಂದರು. ಬುದ್ಧನ ಜ್ಞಾನ ನಮ್ಮಲ್ಲಿ ಅಡಗಿರುವ ಕತ್ತಲೆಯನ್ನು ಓಡಿಸಲು ಇರುವ ಏಕೈಕ ಮಾರ್ಗ. ಈ ಮಾರ್ಗವನ್ನು ಕಂಡುಕೊಂಡರು ಅಂಬೇಡ್ಕರ್. ಇಂದು ನಾವು ಅಂಬೇಡ್ಕರ್ ಮೂಲಕ ಬುದ್ಧನನ್ನು ನೋಡುತ್ತಿದ್ದೇವೆ. ಬಾಬಾ ಸಾಹೇಬರ ಬರವಣಿಗೆ ಬದುಕು ಬುದ್ಧ ಚಿಂತನೆಯೇ ಆಗಿದೆ ಎಂದರು. ಸಂಸದ ಶ್ರೀನಿವಾಸ ಪ್ರಸಾದ್ ಮಾತನಾಡಿದರು. ವಿಶ್ವಮೈತ್ರಿ ಬುದ್ಧ ವಿಹಾರದ ಡಾ. ಕಲ್ಯಾಣಸಿರಿ ಭಂತೇಜಿ, ಡಾ. ಬಿ.ಆರ್. ಅಂಬೇಡ್ಕರ್ ಕೇಂದ್ರದ ಡಾ. ಎಸ್. ನರೇಂದ್ರಕುಮಾರ್, ಪ್ರೊ. ಸಿ. ಬಸವರಾಜು ಸೇರಿದಂತೆ ಇತರರು ಇದ್ದರು. : - - – - -- .. …. ’ : , 16, 2022 (..): “’ ,” . . , -, . , “’ ,” . .. , ‘-- (.),’ 2566 .“’ . . . , ’ . ’ ,” .“’ . . . ’ . . ’ . ’ . . ’ ’ ,” . . . , .. , . . . .. .: / ’ / / . . /