ಬುದ್ಧಪೀಠಕ್ಕೆ ಸ್ಥಾಪನೆಗೆ ಜಾಗ ಕೊಡಿ ಎಂಬ ಸಂಸದ ಶ್ರೀನಿವಾಸ ಪ್ರಸಾದ್ ಮನವಿಗೆ ಸ್ಪಂದಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್. ಮೈಸೂರು,ಮೇ,16.2022(..):ಮೈಸೂರು ವಿಶ್ವವಿದ್ಯಾಲಯದಲ್ಲಿ ಬುದ್ಧಪೀಠ ಸ್ಥಾಪನೆಗೆ ಜಾಗ ಕಲ್ಪಿಸಿಕೊಡಿ ಎಂಬ ಸಂಸದ ಶ್ರೀನಿವಾಸ ಪ್ರಸಾದ್ ಮನವಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮತ್ತು ಸಮಾನತೆ ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ 2566ನೇ ಬುದ್ಧ ಪೂರ್ಣಿಮೆ ಪ್ರಯುಕ್ತ ಸಮಕಾಲೀನ ಜಗತ್ತಿಗೆ ಬುದ್ಧನ ಚಿಂತನೆಗಳು ಎಂಬ ವಿಷಯದ ಬಗ್ಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಮಾತನಾಡಿದರು. ಎಲ್ಲಾ ಅಧ್ಯಯನ ಪೀಠಗಳು ಮೈಸೂರು ವಿವಿಯಲ್ಲಿ ಇದೆ. ಅದರಂತೆ ಬುದ್ಧಪೀಠವೂ ಸ್ಥಾಪನೆಯಾಗಿದೆ. ಇದೀಗ ಒಂದು ವರ್ಷ ಕಳೆದಿದೆ. ಹಾಗಾಗಿ ಜಾಗ ಕೊಟ್ಟರೆ ಬುದ್ಧ ಅಧ್ಯಯನ ಪೀಠವನ್ನು ನಿರ್ಮಿಸಬಹುದೆಂದು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಬುದ್ಧ ಅಧ್ಯಯನ ಪೀಠಕ್ಕೆ ಬೇಕಾದ ಜಾಗವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ವಿಶ್ವಮೈತ್ರಿ ಬುದ್ಧ ವಿಹಾರದ ಡಾ. ಕಲ್ಯಾಣಸಿರಿ ಭಂತೇಜಿ, ಡಾ. ಬಿ.ಆರ್. ಅಂಬೇಡ್ಕರ್ ಕೇಂದ್ರದ ಡಾ. ಎಸ್. ನರೇಂದ್ರಕುಮಾರ್, ಪ್ರೊ. ಸಿ. ಬಸವರಾಜು ಸೇರಿದಂತೆ ಇತರರು ಇದ್ದರು. : -- - - … . . , , May1 6, 2022 (..): . . , -, , ’ . , “’ ,’ , . .. , ‘-- (.),’ 2566 .“ . , . ,” . . . , -, , ’ .. , . . . . . .. .: / / 2566 / . . /