ಮೇ 14ರಂದು ಮೈಸೂರು ವಿವಿ ಇಂಜಿನಿಯರಿಂಗ್ ಕಾಲೇಜು ಹಾಗೂ ಕಟ್ಟಡಗಳ ಉದ್ಘಾಟನಾ ‌ಕಾರ್ಯಕ್ರಮ. ಮೈಸೂರು,ಮೇ,12,2022(..):ವಿಶ್ವವಿದ್ಯಾನಿಲಯ ಇಂಜಿನಿಯರಿಂಗ್ ಕಾಲೇಜು ಹಾಗೂ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ ಮೇ 14ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ನೆರವೇರಿಸಲಿದ್ದಾರೆ. ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ತಂತ್ರಜ್ಞಾನ ಭವನದ ಕಟ್ಟಡ, ಕೋರ್ಸ್‌ ಗಳು ಹಾಗೂ ಹಾಸ್ಟೆಲ್ ಹಾಗೂ ವಿಶ್ವವಿದ್ಯಾನಿಲಯದ ಫಾರ್ಮಸಿ ಕಾಲೇಜು ಕಟ್ಟಡಗಳ ಉದ್ಘಾಟನೆ ನಡೆಯಲಿದೆ. ಅಲ್ಲದೆ, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸುವರ್ಣ ಮಹೋತ್ಸವ ಕಟ್ಟಡ, ಭೂಗೋಳಶಾಸ್ತ್ರ ಮತ್ತು ಭೂ ವಿಜ್ಞಾನ ವಿಭಾಗಗಳ ವಿಸ್ತರಿಸಿದ ಮೊದಲನೇ ಮಹಡಿ ಕಟ್ಟಡ, ಗಣಕ ವಿಜ್ಞಾನ ಅಧ್ಯಯನ ವಿಭಾಗದ ಸಭಾಂಗಣವೂ ಲೋಕರ್ಪಣೆಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕ ಎಲ್. ನಾಗೇಂದ್ರ, ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಸೇರಿದಂತೆ ಸಿಂಡಿಕೇಟ್, ಶೈಕ್ಷಣಿಕ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕುಲಸಚಿವ ಪ್ರೊ.ಆರ್.ಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. : - - - – 14th . … 14Mysuru, 12, 2022 (..): 3.00 14. . .. . , ’ . , ’ , ’ . - .. , , . , . . , .: / / /