ಮೇ 16 ಕ್ಕೆ ಹೊಸ ಪ್ರಕಟಣೆ ಎಂದು ಕಿಚ್ಚ ಸುದೀಪ್ ಟ್ವೀಟ್ ಬೆಂಗಳೂರು, ಮೇ 12, 2022 (..):ಮೇ 16 ಕ್ಕೆ ಚಿತ್ರದ ಬಗ್ಗೆ ಮತ್ತೊಂದು ಪ್ರಕಟಣೆ ನೀಡಲಿದ್ದೇವೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಹೌದು. ಕಿಚ್ಚ ಸುದೀಪ್ ತಮ್ಮ ಮುಂಬರುವ ಸಿನಿಮಾ ವಿಕ್ರಾಂತ್ ರೋಣ ಬಗ್ಗೆ ಮತ್ತೊಂದು ಅಪ್ ಡೇಟ್ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ ಮೊದಲ ಹಾಡು ಬಿಡುಗಡೆ ಬಗ್ಗೆ ಈ ದಿನ ಮಾಹಿತಿ ನೀಡಲಾಗುತ್ತದೆ ಎನ್ನಲಾಗಿದೆ. ಅಂದಹಾಗೆ ವಿಕ್ರಾಂತ್ ರೋಣ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ನಿರ್ದೇಶಕರು ವಿಕ್ರಾಂತ್ ರೋಣ ಕುರಿತು ಪ್ರತಿ ದಿನ ಎಂಬಂತೆ ಹೊಸ ಅಪ್ ಡೇಟ್ ಕೊಡುತ್ತಲೇ ಇರುತ್ತೇವೆ ಎಂದಿದ್ದರು.