ಪಿಎಸ್ ಐ ಹಗರಣದಲ್ಲಿ ಬಂಧಿತ ಆರೋಪಿಯ ಅಣ್ಣ ಆತ್ಮಹತ್ಯೆಗೆ ಶರಣು. ಹಾಸನ,ಮೇ,11,2022(..):ಪಿಎಸ್ ಐ ನೇಮಕಾತಿ ಅಕ್ರಮ ಹಗರಣದಲ್ಲಿ ಬಂಧಿತ ಆರೋಪಿಯ ಅಣ್ಣ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆ ಹೊಳೇನರಸಿಪುರ ತಾ. ಗುಂಜೇವು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಿಎಸ್ ಐ ಹಗರಣದಲ್ಲಿ ಬಂಧಿತನಾಗಿರುವ ಮನುಕುಮಾರ್ ನ ಅಣ್ಣ ವಾಸು ಆತ್ಮಹತ್ಯೆಗೆ ಶರಣಾಗಿದ್ದಾರೆ . 545 ಪಿಎಸ್ ಐ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಮನುಕುಮಾರ್ ಹೆಸರಿತ್ತು. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಮನುಕುಮಾರ್ 50ನೇ ರ್ಯಾಂಕ್ ಪಡೆದಿದ್ದ. ಈ ನಡುವೆ ಮನುಕುಮಾರ್ ಅಣ್ಣ ವಾಸು ಡಿಗ್ರೂಪ್ ನೌಕರನಾಗಿದ್ದು, ಮನುಕುಮಾರ್ ಪಿಎಸ್ ಐ ಹಗರಣದ 8ನೇ ಆರೋಪಿಯಾಗಿದ್ದಾನೆ. ಏಪ್ರಿಲ್ 30 ರಂದು ಮನುಕುಮಾರ್ ಬಂಧನವಾಗಿತ್ತು. ಇದರಿಂದ ಮನನೊಂದು ವಾಸು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. : –- - –-