ಸರ್ಕಾರದ ಎಲ್ಲಾ ಹುದ್ದೆಗಳಲ್ಲೂ ಅಕ್ರಮ: ಮುಂದಿನ ದಿನಗಳಲ್ಲಿ ಹಗರಣಗಳ ಪಟ್ಟಿ ಬಿಡುಗಡೆ ಮಾಡ್ತೇನೆ- ಡಿ.ಕೆ ಶಿವಕುಮಾರ್. ಬೆಂಗಳೂರು,ಮೇ,10,2022(..):ಕೆಪಿಎಸ್ ಸಿ ಒಂದೇ ಅಲ್ಲ. ಸರ್ಕಾರದ ಎಲ್ಲಾ ಹುದ್ದೆಗಳಲ್ಲೂ ಅಕ್ರಮ ನಡೆದಿದೆ. ಮುಂದಿನ ದಿನಗಳಲ್ಲಿ ಹಗರಣಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಪಿಡಬ್ಲ್ಯುಡಿ, ಕೆಪಿಎಸ್ಸಿ ಎಲ್ಲದರಲ್ಲೂ ಅಕ್ರಮ ನಡೆದಿದೆ. ರಾಜ್ಯ ಸರ್ಕರದಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಭ್ರಷ್ಟಾಚಾರವಲ್ಲದೇ ಈ ಸರ್ಕಾರದಲ್ಲಿ ಏನೂ ನಡೆದಿಲ್ಲ. ಮುಂದಿನ ದಿನಗಳಲ್ಲಿ ಹಗರಣಗಳ ಪಟ್ಟಿ ಬಿಡುತ್ತೇನೆ ಎಂದರು. ಸರ್ಕಾರದ ಎಲ್ಲಾ ಹುದ್ದೆಗಳ್ಲೂ ಅಕ್ರಮ ನಡೆದಿದೆ. ಯಾವ ಯಾವ ಹುದ್ದೆಗೆ ಎಷ್ಟೆಷ್ಟು ಹಣ ಎಂದು ನಿಗದಿ ಮಾಡಲಾಗಿದೆ. ದುಡ್ಡಿಲ್ಲದೇ ಸರ್ಕಾರ ಏನು ಮಾಡಿಲ್ಲ ಎಂದು ಡಿ.ಕೆ ಶಿವಕುಮಾರ್ ಆರೋಪಿಸಿದರು. : – - – –-- .